Saturday, July 2, 2022

Latest Posts

ಶಬರಿಮಲೆಯಲ್ಲಿ ಕೊರೋನಾ ಭೀತಿ: ಕಂಟೇನ್ಮೆಂಟ್ ಝೋನ್ ಆಗುತ್ತಾ ಅಯ್ಯಪ್ಪನ ಸನ್ನಿಧಿ?

ಹೊಸದಿಗಂತ ಆನ್ ಲೈನ್ ಡೆಸ್ಕ್:

ಶಬರಿಮಲೆಯಲ್ಲಿ ಮಕರ ಜ್ಯೋತಿಯ ಅವಧಿಯ ಎರಡನೆಯ ಮತ್ತು ಅಂತಿಮ ಹಂತದ ಪೂಜಾ ವಿಧಾನಗಳು ಆರಂಭವಾಗಿದ್ದು, ಗುರುವಾರದಿಂದ ಭಕ್ತರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ.
ಆದರೆ ಇಲ್ಲಿ ದೇವಸ್ಥಾನದ ಇಬ್ಬರು ಅರ್ಚರಕರು ಸೇರಿದಂತೆ ಸನ್ನಿಧಾನದ ಸಮೀಪ 37 ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿರುವುದು ಅಯ್ಯಪ್ಪ ಭಕ್ತರಲ್ಲಿ ಆತಂಕ ಮೂಡಿಸಿದೆ.

ಸನ್ನಿಧಾನದ ಮುಖ್ಯ ಅರ್ಚಕ ವಿ.ಕೆ. ಜಯರಾಜ್ ಪೊಟ್ಟಿ ಮತ್ತು ಅವರ ಆರು ಮಂದಿ ಸಹಾಯಕರು ಕೊರೋನಾ ಪಾಸಿಟಿವ್ ಬಂದಿರುವ ಮೂವರು ಸೋಂಕಿತರ ಜತೆಗೆ ಸಂಪರ್ಕಕ್ಕೆ ಬಂದ ಹಿನ್ನೆಲೆಯಲ್ಲಿ ಅವರನ್ನು ಕ್ವಾರೆಂಟೈನ್‌ಗೆ ಒಳಪಡಿಸಲಾಗಿದೆ ಎಂದು ಟ್ರ್ಯಾವೆಂಕೋರ್ ದೇವಸ್ವಂ ಮಂಡಳಿ ತಿಳಿಸಿದೆ.
ಸನ್ನಿಧಾನದಲ್ಲಿ ತ್ವರಿತ ಪರೀಕ್ಷೆ ಕಾರ್ಯ ನಡೆಸುವ ವೇಳೆ ಮುಖ್ಯ ಅರ್ಚಕರಿಗೆ ಅಡುಗೆ ಮಾಡುವ ವ್ಯಕ್ತಿ ಹಾಗೂ ಇಬ್ಬರು ಕಿರಿಯ ಅರ್ಚಕರಲ್ಲಿ ಪಾಸಿಟಿವ್ ಕಂಡುಬಂದಿದೆ. ಹೀಗಾಗಿ ಮೆಲ್ಸಂತಿ (ಮುಖ್ಯ ಅರ್ಚಕ) ಮತ್ತು ಅವರ ಸಹಾಯಕರನ್ನು ಕ್ವಾರೆಂಟೈನ್‌ನಲ್ಲಿ ಇರುವಂತೆ ಸೂಚಿಸಲಾಗಿದೆ. ಶಬರಿಮಲೆ ಯಾತ್ರೆ ನಿಗದಿಯಂತೆ ಮುಂದುವರಿಯಲಿದೆ ಎಂದು ಟಿಡಿಬಿ ವಕ್ತಾರರು ತಿಳಿಸಿದ್ದಾರೆ.

ಇತ್ತ ಸನ್ನಿಧಾನದಲ್ಲಿ ಹೆಚ್ಚಿನ ಕೊರೋನಾ ಪ್ರಕರಣಗಳು ವರದಿಯಾಗಿರುವುದರಿಂದ ಯಾತ್ರಾ ವಲಯವನ್ನು ಕಂಟೇನ್ಮೆಂಟ್ ಝೋನ್ ಎಂದು ಘೋಷಿಸಬೇಕೇ ಅಥವಾ ಬೇಡವೇ ಎಂಬ ಗೊಂದಲವು ಆರೋಗ್ಯ ಹಾಗೂ ಕಂದಾಯ ಅಧಿಕಾರಿಗಳಲ್ಲಿ ಮೂಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss