Sunday, August 14, 2022

Latest Posts

ಶಬರಿಮಲೆ ಅಯ್ಯಪ್ಪ ಸನ್ನಿಧಾನದಲ್ಲಿ ಮಕರ ಜ್ಯೋತಿಯ ದರುಶನಕ್ಕೆ ಕ್ಷಣಗಣನೆ

ಹೊಸ ದಿಗಂತ ಆನ್ ಲೈನ್ ಡೆಸ್ಕ್

ಶಬರಿಮಲೆ ಅಯ್ಯಪ್ಪ ಸನ್ನಿಧಾನ ಇಂದು ಮಕರ ಜ್ಯೋತಿಯ ಸಂಭ್ರಮ. ಸಂಕ್ರಾಂತಿಯ ಈ ಶುಭ ದಿನದಂದು ಸ್ವಾಮಿಗೆ ವಿಶೇಷ ಪೂಜೆಗಳು ಮುಂಜಾನೆಯಿಂದಲೇ ನಡೆದಿದ್ದು, ಮಕರ ಜ್ಯೋತಿಗೆ ದೇಗುಲ ಸಜ್ಜಾಗುತ್ತಿದೆ.
ಅಯ್ಯಪ್ಪನನ್ನು ತಿರುವಭರಣಂದೊಂದಿಗೆ ಅಲಂಕರಿಸಿ, ಮಹಾದೀಪಾರಾಧನೆ ಬಳಿಕ ಸಂಜೆ 6.40ರ ಸುಮಾರಿಗೆ ಮಕರ ಜ್ಯೋತಿ ದರ್ಶನ ನಡೆಯಲಿದ್ದು, ಎಲ್ಲ ವ್ಯವಸ್ಥೆಗಳು ಶಬರಿಮಲೆಯಲ್ಲಿ ಪೂರ್ಣಗೊಂಡಿವೆ.
ಕೋವಿಡ್​ ಪ್ರೋಟೋಕಾಲ್ ಮಧ್ಯೆ, ಈ ವರ್ಷದ ಮಕರ ಜ್ಯೋತಿ ಉತ್ಸವವು ಹೆಚ್ಚಿನ ಜನಸಂದಣಿಯಿಲ್ಲದೇ ನಡೆಯುತ್ತಿದ್ದು, ಜ್ಯೋತಿ ದರುಶನಕ್ಕೆ ಸನ್ನಿಧಾನದಿಂದ ಕೆಲವು ಭಕ್ತಾಧಿಗಳಷ್ಟೇ ಸಾಕ್ಷಿಯಾಗಲಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss