Sunday, April 11, 2021

Latest Posts

ಶಬರಿಮಲೆ ತೆರಳಿದ್ದ ಎಲ್ಲಾ ಭಕ್ತರಿಗೆ ಸಿಗುತ್ತಾ ಮಕರ ಜ್ಯೋತಿಯ ದರುಶನ? ದೇವಸ್ವಂ ಮಂಡಳಿ ಹೇಳಿದ್ದೇನು?

ಹೊಸದಿಗಂತ ಆನ್ ಲೈನ್ ಡೆಸ್ಕ್:

ಕೊರೋನಾ ಭೀತಿ ನಡುವೆಯೂ ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇಗುಲ ಭಕ್ತರ ದರುಶನಕ್ಕೆ ತೆರೆದಿದ್ದು, ಆವರಣಗಳನ್ನು ಥರ್ಮಲ್ ಫಾಗಿಂಗ್ ಮೂಲಕ ಸೋಂಕು ಮುಕ್ತಗೊಳಿಸಲು ಅಗತ್ಯ ಕ್ರಮಕೈಗೊಳ್ಳಲಾಗುತ್ತಿದೆ.

ಇತ್ತ  ದೇವಸ್ವಂ ಮಂಡಳಿ ದಿನಕ್ಕೊಂದು ಹೇಳಿಕೆ ನೀಡಿ ಭಕ್ತರಲ್ಲಿ ಗೊಂದಲಸೃಷ್ಟಿಸುತ್ತಿದೆ. ಈಗಾಗಲೇ ಮಕರ ಜ್ಯೋತಿಯ ಯಾತ್ರೆಯ ಆರಂಭವಾಗಿದ್ದು,   ಭಕ್ತಾದಿಗಳ ಪ್ರತಿದಿನ ಪ್ರವೇಶ ಸಂಖ್ಯೆಯನ್ನು 5 ಸಾವಿರಕ್ಕೇರಿಸಲಾಗಿದೆ.

ಆದರೆ, ಜನವರಿ 14ರ ಸಂಕ್ರಾಂತಿ ವಿಶೇಷ ಸಂದರ್ಭದ ಮಕರ ಜ್ಯೋತಿಯ ಅಚರಣೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರಿಗೆ ಪ್ರವೇಶ ಅವಕಾಶ ದೊರೆಯಲಿದೆ ಎಂಬ ಸುದ್ದಿಯನ್ನು ತಿರುವಾಂಕೂರು ದೇವಸ್ವಂ ಮಂಡಳಿ ಅಲ್ಲಗೆಳೆದಿದೆ.

ಹೌದು, ಈ ಕುರಿತು  ಮಾತನಾಡಿದ ಮಂಡಳಿ ಮುಖ್ಯಸ್ಥ ಎನ್ ವಾಸು, ವರ್ಚುಯಲ್ ಕ್ಯೂ ಮೂಲಕ ಮುಂಗಡವಾಗಿ ಬುಕ್ ಮಾಡಿದ ಭಕ್ತಾದಿಗಳಿಗೆ ಮಾತ್ರ  ದರುಶನಕ್ಕೆ  ಅವಕಾಶ ನೀಡಲಾಗುತ್ತದೆ. ಮುಂಗಡ ಬುಕ್ಕಿಂಗ್ ಇಲ್ಲದಿದ್ದರೆ ಸನ್ನಿಧಾನಂ ಅಥವಾ ಆವರಣದೊಳಗೆ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ. ಜೊತೆಗೆ 5,000 ಸಂಖ್ಯೆಯನ್ನು ಹೆಚ್ಚಿಸುವುದಿಲ್ಲ. ಮಕರ ಜ್ಯೋತಿಯ  ದಿನದಂದು ಕೂಡಾ ಇದೇ ನಿಯಮ ಅನುಸರಿಸಲಾಗುತ್ತದೆ ಎಂದಿದ್ದಾರೆ.

ಇನ್ನು   ಜನವರಿ 19ರ ತನಕ ಮಕರ ಜ್ಯೋತಿಯ ಹಬ್ಬದ ಋತು ಜಾರಿಯಲ್ಲಿರಲಿದ್ದು, ಜನವರಿ 20ರಂದು ದೇಗುಲ ಬಂದ್ ಆಗಲಿದೆ. ಆರ್‌ಟಿ-ಪಿಸಿಆರ್ ಪರೀಕ್ಷೆ ನಡೆಸಿ, ಕೋವಿಡ್  19 ನೆಗಟಿವ್ ಇದ್ದ ಭಕ್ತರು ಮಾತ್ರ ಶಬರಿ ಬೆಟ್ಟವನ್ನೇರಬಹುದಾಗಿದೆ. ಈ ಮುಂಚೆ ಆಂಟಿಜನ್ ಪರೀಕ್ಷೆ ವರದಿಯಲ್ಲಿ ನೆಗಟಿವ್ ಎಂದರೆ ಬಂದರೆ ಸಾಕಿತ್ತು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss