Thursday, August 18, 2022

Latest Posts

ಶಬರಿಮಲೆ: ಯಾತ್ರಾರ್ಥಿಗಳ ಆರೋಗ್ಯ ಸುರಕ್ಷತೆಗೆ 48 ಆಸ್ಪತ್ರೆಗಳು ಸಜ್ಜು!

ಹೊಸ ದಿಗಂತ ಆನ್‌ಲೈನ್ ಡೆಸ್ಕ್:

ಕೋವಿಡ್ ಕರಿನೆರಳಿನ ಹಿನ್ನೆಲೆಯಲ್ಲಿ ಕೇರಳದ ಪ್ರಸಿದ್ಧ ಯಾತ್ರಾ ಸ್ಥಳವಾದ ಶಬರಿಮಲೆಗೆ ಆಗಮಿಸುವ ಯಾತ್ರಾರ್ಥಿಗಳ ಮೇಲೆ ಆರೋಗ್ಯ ಇಲಾಖೆ ಹೆಚ್ಚಿನ ಕಾಳಜಿ ವಹಿಸಿದೆ.
ಯಾತ್ರಾರ್ಥಿಗಳ ತುರ್ತು ಆರೋಗ್ಯ ಸೇವೆ ಒದಗಿಸುವ ಹಿನ್ನೆಲೆಯಲ್ಲಿ ೪೮ ಆಸ್ಪತ್ರೆಗಳನ್ನು ಗುರುತಿಸಿದೆ. ಕಾರುಣ್ಯ ಆರೋಗ್ಯ ಸುರಕ್ಷಾ ಕಾರ್ಡ್ ಹೊಂದಿರುವ ಯಾತ್ರಿಗಳು ಇಲ್ಲಿ ಉಚಿತವಾಗಿ ಚಿಕಿತ್ಸೆ ಪಡೆದುಕೊಳ್ಳಬಾಹುದಾಗಿದೆ. ಇದಲ್ಲದೆ ಅನ್ಯ ರಾಜ್ಯಗಳಿಂದ ಬರುವ ಯಾತ್ರಾರ್ಥಿಗಳು  ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನಾ ಕಾರ್ಡ್ ಹೊಂದಿದ್ದರೆ ಇಲ್ಲಿ ಉಚಿತ ಚಿಕಿತ್ಸೆ ಲಭಿಸಲಿದೆ. ಪಟ್ಟನಂತಿಟ್ಟದಲ್ಲಿ ೨೧ ಹಾಗೂ  ಕೊಟ್ಟಾಯಂನಲ್ಲಿ ೨೭ ಆಸ್ಪತ್ರೆಗಳು ಈ ಪಟ್ಟಿಯಲ್ಲಿ ಸೇರಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!