ಶವಾಸನ ಮಾಡುವುದರಿಂದ ದೇಹ ಹಾಗೂ ಮೈಂಡ್ ರಿಲ್ಯಾಕ್ಸ್ ಆಗುತ್ತದೆ. ಯೋಗದಲ್ಲಿರುವ ಎಲ್ಲಾ ಆಸನಗಳಿಗೆ ಹೋಲಿಸಿದರೆ ಇದರಲ್ಲಿ ಏನು ಮಾಡುವುದು ಇರುವುದಿಲ್ಲ ಎನಿಸಬಹುದು. ಆದರೆ ಶವಾಸನ ಯೋಗದ ಅತಿ ಮುಖ್ಯ ಭಾಗ. ಇದನ್ನು ಸರಿಯಾಗಿ ಮಾಡಿದರೆ ಮಾತ್ರ ಲಾಭ ಸಿಗುತ್ತದೆ. ಯೋಗದ ಎಲ್ಲ ಆಸನಗಳು ಮುಗಿದ ನಂತರ ಶವಾಸನ ಮಾಡುತ್ತಾರೆ. ಶವದಂತೆ ಮಲಗಿ ತನ್ನ ದೇಹದ ಮೇಲೆ ಇಲ್ಲಿ ಗಮನ ಹರಿಸಲಾಗುತ್ತದೆ. ಶವಾಸನದ ಉಪಯೋಗಗಳೇನು ನೋಡೋಣ ಬನ್ನಿ..
- ರಿಫ್ರೆಶ್ ಮೈಂಡ್: ಚೆನ್ನಾಗಿ ವರ್ಕೌಟ್ ಅಥವಾ ಯೋಗಾಭ್ಯಾಸ ಮಾಡಿದ ನಂತರ ಶವಾಸನ ಮಾಡಿದರೆ ಅದರಿಂದ ಆಗುವ ಲಾಭಕ್ಕೆ ಲೆಕ್ಕ ಇಲ್ಲ. ಇದರಿಂದಾಗಿ ನಿಮ್ಮ ದೇಹಕ್ಕೆ ರಿಲ್ಯಾಕ್ಸ್ ಆಗಲು ಸಮಯ ಸಿಗುತ್ತದೆ. ಮೈಂಡ್ ಶಾಂತಿಯಿಂದ ಇರುತ್ತದೆ.
- ರಕ್ತ ಸಂಚಲನ: ರಕ್ತ ಸಂಚಲನ ಸರಿಯಾಗಿ ಆಗದಿದ್ದರೆ ಮಸಲ್ ಕ್ರಾಮ್ಪ್ಸ್ ಹಾಗೂ ನರ್ವ್ ಡ್ಯಾಮೇಜ್ ಆಗುತ್ತದೆ. ಶವಾಸನ ಮಾಡುವಾಗ ಉಸಿರಾಟ ಚೆನ್ನಾಗಿರುತ್ತದೆ. ಇದು ನಮ್ಮ ಇಡೀ ದೇಹಕ್ಕೆ ಆಕ್ಸಿಜನ್ ಸಪ್ಲೇ ಮಾಡುತ್ತದೆ. ಇದರಿಂದಗಿ ಆರೋಗ್ಯ, ಚರ್ಮ, ಸೆಲ್ ಗ್ರೋಥ್ ಎಲ್ಲವೂ ಚೆನ್ನಾಗಿರುತ್ತದೆ.
- ಇನ್ಸೋಮ್ನಿಯಾ ಗುಣ: ನಿದ್ದೆ ಬಾರದ ಸ್ಥಿತಿಯನ್ನು ಇನ್ಸೋಮ್ನಿಯಾ ಎನ್ನುತ್ತಾರೆ. ಮಲಗಿ ಯಾವ ಪೋಸ್ ಕೂಡ ಮಾದೆ ಬರೀ ಉಸಿರಾಡುವುದರಿಂದ ಬ್ಲಡ್ ಸರ್ಕುಲೇಶನ್ ಹೆಚ್ಚಾಗಿ, ದೇಹದ ಕೆಟ್ಟ ಅಂಶ ಹೊರಹೋಗುತ್ತದೆ. ಇದರಿಂದ ಪಾಸಿಟಿವ್ ಎನರ್ಜಿ ಬಂದು ಮೈಂಡ್ ರಿಲ್ಯಾಕ್ಸ್ ಆಗುತ್ತದೆ. ಆಗ ನಿದ್ದೆ ಚೆನ್ನಾಗಿ ಬರುತ್ತದೆ.
- ತಲೆನೋವು ಹಾಗೂ ಡಿಪ್ರೆಶನ್ನಿಂದ ದೂರ: ಶವಾಸನದಿಂದ ಎನರ್ಜಿ ಹೆಚ್ಚಾಗಿ, ಆ ಎನರ್ಜಿ ದಿನ ಇಡೀ ನಿಮ್ಮಲ್ಲಿ ಇರುತ್ತದೆ. ಇದರಿಂದಾಗಿ ನಿಮ್ಮ ಏಕಾಗ್ರತೆ ಹೆಚ್ಚುತ್ತದೆ. ಇಡೀ ದೇಹದ ಬಗ್ಗೆ ಗಮನ ಕೊಡುವಾಗ ಮೆದುಳಿನ ಸೆಲ್ಗಳು ಆಕ್ವಿವೇಟ್ ಆಗುತ್ತದೆ. ಇದರಿಂದ ಸ್ಟ್ರೆಸ್,ಡಿಪ್ರೆಶ್ನ್ ನಿಮ್ಮನ್ನು ಕಾಡದು.