Wednesday, August 10, 2022

Latest Posts

ಶಾಂತಿ-ಸೌಹಾರ್ದತೆಯಿoದ ಬ್ರಕೀದ್ ಆಚರಿಸಿ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸಲಹೆ

ಧಾರವಾಡ: ಐತಿಹಾಸಿಕ ಬಕ್ರೀದ್ ಹಬ್ಬವನ್ನು ಎಲ್ಲ ಧರ್ಮಿಯರೂ ಪರಸ್ಪರ ಪ್ರೀತಿ, ವಿಶ್ವಾಸದಿಂದ ಮತ್ತು ಶಾಂತಿ ಸೌಹಾರ್ದತೆಯಿಂದ ಆಚರಿಸಬೇಕು. ಆ.1ರಂದು ಜಾಗೃತಿ ವಹಿಸುವ ಜೊತೆಗೆ ಮಾರ್ಗಸೂಚಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯ ನೂತನ ಸಭಾಂಗಣದಲ್ಲಿ ಬಕ್ರೀದ್ ಹಬ್ಬದ ಹಿನ್ನಲೆ ಆಯೋಜಿಸಿದ್ದ ಕೋರೊನಾ ಮುಂಜಾಗೃತಾ ಕ್ರಮಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಕ್ರೀದ್ ಹಬ್ಬದಲ್ಲಿ ಪ್ರಾರ್ಥನಾ ಸ್ಥಳದಲ್ಲಿ ಎಲ್ಲರೂ ಮಾಸ್ಕ್ ಬಳಸುವುದು ಕಡ್ಡಾಯ ಎಂದು ತಿಳಿಸಿದರು.
ಮಸೀದಿಗಳಲ್ಲಿ ಧಾರ್ಮಿಕ ಗ್ರಂಥ ಮುಟ್ಟುವಂತಿಲ್ಲ. ಪರಸ್ಪರ ಹಸ್ತಲಾಘವ, ಆಲಿಂಗನ ನಿಷೇಧಿಸಿದೆ. ಅಪರಿಚಿತರು ಪ್ರಾರ್ಥನೆ ಸಲ್ಲಿಸಲು ಮಸೀದಿಗೆ ಬರದಂತೆ ಎಚ್ಚರ ವಹಿಸಬೇಕು. ಹಬ್ಬದ ಜೊತೆಗೆ ಕುಟುಂಬ ಸದಸ್ಯರ ಆರೋಗ್ಯ ಮತ್ತು ಯೋಗಕ್ಷೇಮ ಮುಖ್ಯ. ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದರು.
ಜಿಲ್ಲಾಡಳಿತ, ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದೆ. ಮಸೀದಿಗಳ ಮೈಕ್ ಮೂಲಕ ಹಾಗೂ ಜಮಾತ್, ಧಾರ್ಮಿಕ ಮುಖಂಡರ ಮುಖಾಂತರ ಪ್ರತಿ ಮನೆಗಳಿಗೂ ಕೋವಿಡ್ ಹಿನ್ನೆಲೆ ಬಕ್ರೀದ್ ಹಬ್ಬದ ಆಚರಣೆ ಮಾರ್ಗಸೂಚಿಗಳನ್ನು ತಲುಪಿಸುವಂತೆ ತಿಳಿಸಿದರು.
ಪೊಲೀಸ್ ಆಯುಕ್ತ ಆರ್. ದಿಲೀಪ್, ನೈತಿಕ ಪೊಲೀಸ್‌ಗಿರಿಗೆ ಅವಕಾಶವಿಲ್ಲ. ಅಂತಹ ಸಂದರ್ಭ ಬಂದಲ್ಲಿ ಇಲಾಖೆಯು ಕಾನೂನು ಪರಗಿ ಕೆಲಸ ಮಾಡುತ್ತದೆ. ಹಬ್ಬ ಆಚರಿಸುವವರು ಲೈಸೆನ್ಸ್ ಹೊಂದಿರುವ ಕಸಾಯಿಖಾನೆಗಳನ್ನು ಮಾತ್ರ ಬಳಸಬೇಕೆಂದು ಪೊಲೀಸ್ ವಿನಂತಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್, ಕಂಟೈನ್‌ಮೆoಟ್ ಝೋನ್ ಜನರು ಮಸೀದಿಗೆ ಹೋಗಿ ಪ್ರಾರ್ಥನೆ ಮಾಡಲು ಅವಕಾಶವಿಲ್ಲ. ಏಕೆಂದರೆ ಈ ಝೋನ್‌ನಿಂದ ಸೋಂಕು ಪಸರಿಸುವ ಸಾಧ್ಯತೆ ಇದೆ. ಅಲ್ಲಿನ ನಿವಾಸಿಗಳು ತಮ್ಮ ಮನೆಗಳಲ್ಲಿ ಪ್ರಾರ್ಥನೆ ಸಲ್ಲಿಸಬೇಕೆಂದು ತಿಳಿಸಿದರು.
ಸಭೆಯಲ್ಲಿ ಉಪ ಪೊಲೀಸ್ ಆಯುಕ್ತ ಕೃಷ್ಣಕಾಂತ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಹುಬ್ಬಳ್ಳಿ ಅಂಜುಮಾನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಯೂಸೂಫ್ ಸವಣೂರ, ಕಾರ್ಯದರ್ಶಿ ಅಲ್ತಾಫ್ ಕಿತ್ತೂರ, ಧಾರವಾಡ ಅಂಜುಮಾನ್ ಇಸ್ಲಾಂ ಸಂಸ್ಥೆಯ ಆಡಳಿತಾಧಿಕಾರಿ ಮಹಮ್ಮದ್ ಜುಬೇರ್, ಮಾಜಿ ಮೇಯರ್ ಐ.ಎಂ.ಜವಳಿ ಮುಸ್ಲಿಂ ಮುಖಂಡರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss