Tuesday, August 16, 2022

Latest Posts

ಶಾಕಿಂಗ್ ನ್ಯೂಸ್: ಇಂಧನ ಬೆಲೆ ಮತ್ತೆ ತುಟ್ಟಿ: ಎಲ್ಲೆಲ್ಲಿ ಎಷ್ಟೆಷ್ಟು‌ ರೇಟ್?

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ದಿನೇ ದಿನೇ ತೈಲ ದರ ಏರಿಕೆಯಾಗುತ್ತಲೇ ಇದ್ದು, 29 ದಿನಗಳ ಬಳಿಕ ನಿನ್ನೆ ಏರಿಕೆ ಕಂಡಿದ್ದ ಪೆಟ್ರೋಲ್ ದರ ಇಂದು ಮತ್ತೆ ಏರಿಕೆಯಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರ ಇಂದು 23 ಪೈಸೆ ಹೆಚ್ಚಳವಾಗಿದ್ದು, ಈ ಮೂಲಕ ಲೀ. ಪೆಟ್ರೋಲ್ ದರ 84.2 ರೂ. ಆಗಿದೆ. ಅಂತೆಯೇ ಡೀಸೆಲ್ ದರ ಇಂದು 26 ಪೈಸೆ ಹೆಚ್ಚಳವಾಗಿದ್ದು, ಲೀ. ಡೀಸೆಲ್ ದರ 74.38ಕ್ಕೆ ಏರಿಕೆಯಾಗಿದೆ.

ಮುಂಬೈನಲ್ಲಿ ಇಂದು ಪ್ರತಿ ಲೀ.‌ ಪೆಟ್ರೋಲ್ ದರ 90.83 ಮತ್ತು ಡೀಸೆಲ್ ಲೀ. 81.07ಕ್ಕೆ ಏರಿಕೆಯಾಗಿದೆ. ಚೆನ್ನೈನಲ್ಲಿ ಇಂದು ಪ್ರತಿ ಲೀ.‌ ಪೆಟ್ರೋಲ್ ದರ 86.96 ಮತ್ತು ಡೀಸೆಲ್ ಲೀ. 79.72ಕ್ಕೆ ಏರಿಕೆಯಾಗಿದೆ.

ಕೋಲ್ಕತ್ತಾದಲ್ಲಿ ಇಂದು ಪೆಟ್ರೋಲ್ ಲೀ. ದರ 85.68 ಕ್ಕೆ ಏರಿಕೆಯಾಗಿದ್ದು, ಡೀಸೆಲ್ ದರ 77.97ರೂ. ಗೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಇಂದು ಪೆಟ್ರೋಲ್ ದರ ಲೀ. 87.2 ರೂ. ಏರಿಕೆಯಾಗಿದೆ.ಡೀಸೆಲ್ ದರ 78.86ರೂ. ಗೆ ಏರಿಕೆಯಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss