Wednesday, August 10, 2022

Latest Posts

ಶಾಲಾ ಪಠ್ಯವಾಗಿ ಶೀಘ್ರವೇ ಯಕ್ಷಗಾನ: ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎ. ಹೆಗಡೆ ವಿಶ್ವಾಸ

ಹೊಸ ದಿಗಂತ ವರದಿ, ಮಂಗಳೂರು:

ಯಕ್ಷಗಾನವನ್ನು ಶಾಲಾ ಪಠ್ಯವಾಗಿಸುವ ನಿಟ್ಟಿನಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಕಾರ್ಯಪ್ರವೃತ್ತವಾಗಿದೆ. ಶೀಘ್ರದಲ್ಲೇ ಸರಕಾರದಿಂದ ಅಧಿಕೃತ ಆದೇಶ ಬರುವ ವಿಶ್ವಾಸವಿದೆ ಎಂದು ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎ. ಹೆಗಡೆ ಹೇಳಿದರು.
ನಗರದ ತುಳು ಸಾಹಿತ್ಯ ಅಕಾಡೆಮಿ ಚಾವಡಿಯಲ್ಲಿ ಭಾನುವಾರ ನಡೆದ ಕರ್ನಾಟಕ ಯಕ್ಷಗಾನ ಅಕಾಡೆಮಿಯ ೨೦೧೯ನೇ ಸಾಲಿನ ಗೌರವ ಪ್ರಶಸ್ತಿ, ಯಕ್ಷಸಿರಿ ವಾರ್ಷಿಕ ಪ್ರಶಸ್ತಿ, ಪುಸ್ತಕ ಬಹುಮಾನ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಾಲೆಯಲ್ಲಿ ಯೋಗ, ನೃತ್ಯ, ಸಂಗೀತದಂತೆ ಯಕ್ಷಗಾನಕ್ಕೂ ಅವಕಾಶ ನೀಡಬೇಕೆಂಬ ಆಗ್ರಹವನ್ನು ಯಕ್ಷಗಾನ ಅಕಾಡೆಮಿ ಶಿಕ್ಷಣ ಸಚಿವರಲ್ಲಿ ನೀಡಿದ್ದು, ಅದಕ್ಕೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಯಕ್ಷಗಾನವನ್ನು ಶಾಲಾ ಪಠ್ಯವನ್ನಾಗಿಸುವ ಪ್ರಕ್ರಿಯೆ ಪಠ್ಯಪುಸ್ತಕ ನಿರ್ದೇಶನಾಲಯದಲ್ಲಿದ್ದು, ಪಠ್ಯಪುಸ್ತಕ ರಚನೆ ಸಮಿತಿ ನೇಮಕವಾಗಬೇಕಿದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss