Wednesday, July 6, 2022

Latest Posts

ಶಾಲಾ ಶಿಕ್ಷಣ ಸುಧಾರಣೆಗೆ ವಿಶ್ವ ಬ್ಯಾಂಕ್‌ನ ನೆರವಿನ ‘ಸ್ಟಾರ್‌’ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ

ಹೊಸದಿಲ್ಲಿ: ಶಾಲಾ ಶಿಕ್ಷಣ ಸುಧಾರಣೆಗಾಗಿ ವಿಶ್ವ ಬ್ಯಾಂಕ್‌ನ ನೆರವಿನ ‘ಸ್ಟಾರ್‌’ ಯೋಜನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ ಎಂದು ಕೇಂದ್ರ ಮಾಹಿತಿ ನೀಡಿದೆ.
ಈ ಕುರಿತಂತೆ ಮಾಹಿತಿ ನೀಡಿದ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್‌ ಜಾವಡೇಕರ್ ಅವರು, ವಿಶ್ವ ಬ್ಯಾಂಕಿನ 500 ಮಿಲಿಯನ್ ಅಮೆರಿಕ ಡಾಲರ್(ಅಂದಾಜು 3,700 ಕೋಟಿ ರೂ.) ಆರ್ಥಿಕ ನೆರವಿನೊಂದಿಗೆ ಒಟ್ಟು 5,718 ಕೋಟಿ ರೂ.ಗಳ ಯೋಜನಾ ವೆಚ್ಚದೊಂದಿಗೆ ರಾಜ್ಯಗಳಿಗೆ ಬಲಪಡಿಸುವ ಬೋಧನೆ-ಕಲಿಕೆ ಮತ್ತು ಫಲಿತಾಂಶಗಳನ್ನು ಅನುಷ್ಠಾನಗೊಳಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದರು.
ಸ್ಟಾರ್ಸ್‌ ಯೋಜನೆಯನ್ನು ಶಿಕ್ಷಣ ಸಚಿವಾಲಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ವಿಭಾಗದಡಿ ಕೇಂದ್ರ ಸರ್ಕಾರ ಪ್ರಾಯೋಜಿತ ಹೊಸ ಯೋಜನೆಯಾಗಿ ಜಾರಿಯಾಗಲಿದೆ ಎಂದರು. ಹಿಮಾಚಲ ಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ, ಮಧ್ಯಪ್ರದೇಶ, ಕೇರಳ ಮತ್ತು ಒಡಿಶಾ ರಾಜ್ಯಗಳಲ್ಲಿ ಈ ಯೋಜನೆ ಜಾರಿಗೆ ಬರಲಿದೆ ಎಂದು ಸಚಿವರು ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss