Tuesday, July 5, 2022

Latest Posts

ಶಾಲೆ ಪ್ರಾರಂಭದ ಕುರಿತು ಕನ್ನಡ ಚಿತ್ರರಂಗದ ಖ್ಯಾತ ನಟ, ನಿರ್ದೇಶಕ ಟಿ.ಎನ್ ಸೀತಾರಾಮ್ ಪ್ರತಿಕ್ರಿಯೆ: ಏನು ಹೇಳಿದ್ದಾರೆ ನೋಡಿ

ಬೆಂಗಳೂರು: ಶಾಲಾ ಪ್ರಾರಂಭದ ಕುರಿತು ರಾಜ್ಯದೆಲ್ಲೆಡೆ ವಿಪರೀತ ಚರ್ಚೆ ನಡೆಯುತ್ತಿರುವ ನಡುವೆ ಕನ್ನಡ ಚಿತ್ರರಂಗದ ಖ್ಯಾತ ನಟ, ನಿರ್ದೇಶಕ ಟಿ.ಎನ್ ಸೀತಾರಾಮ್ ಪ್ರತಿಕ್ರಿಯಿಸಿದ್ದಾರೆ.

ತಮ್ಮ ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಟಿ.ಎನ್ ಸೀತಾರಾಮ್ ಅವರು, ಕೊರೋನಾ ಅಬ್ಬರದಲ್ಲಿ ಪುಟ್ಟ ಮಕ್ಕಳ ಶಾಲೆಗಳನ್ನು ತೆರೆಯುವುದು ಬೇಡ. ವಾದ ಏನೇ ಇರಲಿ ಒಂದೇ ಒಂದು ಪುಟ್ಟ ಮಗುವಿಗೆ ಏನಾದರೂ ಕೊರೋನಾ ಸಂಬಂಧಿತ ಅಪಾಯವಾದರೆ ಇಡಿಯ ರಾಜ್ಯದ ತಂದೆ ತಾಯಿಗಳು ಆತಂಕ, ಹಿಂಸೆ ಪಡಲು ಶುರು ಮಾಡುತ್ತಾರೆ ಎಂದರು.

ಹೆಚ್ಚು ಆದರಂತೂ ರಾಜ್ಯದ ಅಂತಃಕಳೆ ಮಂಕಾಗಿ ಎಲ್ಲರೂ ಪಾಪ ಪ್ರಜ್ಞೆ ಅನುಭವಿಸ ಬೇಕಾಗುತ್ತದೆ. ಒಂದು ವರ್ಷ ಮಕ್ಕಳಿಗೆ ಸುಮ್ಮನೆ promotion ಕೊಟ್ಟರೆ ನಷ್ಟ ವೇನಿಲ್ಲ.ಮುಂದೆ ಅದನ್ನು ಸರಿ ಮಾಡಿಕೊಳ್ಳಬಲ್ಲ ಬುದ್ಧ, ಚಾಣಾಕ್ಷತೆ ಮಕ್ಕಳಿಗಿರುತ್ತದೆ. ಸಧ್ಯಕ್ಕೆ ಶಾಲೆ ಶುರುಮಾಡುವುದು ಬೇಡ. ಎಂದು ಪೋಸ್ಟ್ ಮಾಡಿ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss