Sunday, June 26, 2022

Latest Posts

ಶಾಲೆ ಸಮೀಪವಿರುವ ಮದ್ಯದಂಗಡಿ ತೆರವುಗೊಳಿಸಲು ಸಿಎಂಗೆ ಮನವಿ ಸಲ್ಲಿಸಿದ ವಿದ್ಯಾರ್ಥಿಗಳು!

ಹೊಸ ದಿಗಂತ ವರದಿ, ಮೈಸೂರು:

ಮೈಸೂರಿನ ಜೆ.ಪಿ.ನಗರದಲ್ಲಿರುವ ಅಕ್ಕಮಹಾದೇವಿ ರಸ್ತೆಯ ಮಹರ್ಷಿ ಶಾಲೆ ಸಮೀಪದಲ್ಲಿ ಮದ್ಯದ ಅಂಗಡಿ ತೆರೆದಿದ್ದು, ಇದನ್ನು ಕೂಡಲೇ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ವಿದ್ಯಾರ್ಥಿಗಳು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರಿಗೆ ಇಂದು ಮನವಿ ಸಲ್ಲಿಸಿದರು.
ಮೈಸೂರಿಗೆ ಆಗಮಿಸಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರನ್ನು ಭೇಟಿ ಮಾಡಿದ ಮಹರ್ಷಿ ಶಾಲೆ,ಕಾಲೇಜು, ಡಿ.ಎ.ವಿ ಶಾಲೆ, ಶಾರದ ವಿದ್ಯಾ ಮಂದಿರ ಪಿ.ಯು.ಕಾಲೇಜು, ಜಾಕಿ ಫ್ಯಾಕ್ಟರಿಯ ಆಡಳಿತ ಮಂಡಳಿಗಳ ವತಿಯಿಂದ ಮದ್ಯದ ಅಂಗಡಿಯನ್ನ ಮುಚ್ಚುವಂತೆ ವಿದ್ಯಾರ್ಥಿಗಳ ಮೂಲಕ ಮನವಿ ಮಾಡಿಕೊಂಡರು.
ಈ ಸಮಯದಲ್ಲಿ ಶಾಸಕ ಎಸ್.ಎ.ರಾಮದಾಸ್, ಮಹರ್ಷಿ ಶಾಲೆಯ ಮ್ಯಾನೇಜಿಂಗ್ ಟ್ರಸ್ಟಿ ಭವಾನಿ ಶಂಕರ್, ಸಿ.ಇ.ಒ ತೇಜಸ್ ಶಂಕರ್, ಡಿ.ಎ.ವಿ ಕಾರ್ಯದರ್ಶಿ ಆರ್.ಆನಂದ್ ಹಾಗೂ ಎಸ್.ವಿ.ಎಂ ಕಾಲೇಜಿನ ಅಧ್ಯಕ್ಷ ಎನ್ ಸಚ್ಛಿದಾನಂದ ಮೂರ್ತಿ, ಸಿ.ಇ.ಒ ಜಯಶ್ರಿ ಎಸ್ ಮೂರ್ತಿ , ಜಾಕಿ ಫ್ಯಾಕ್ಟರಿಯ ಆಡಳಿತ ಮಂಡಳಿ, ಮಹರ್ಷಿಶಾಲೆ, ಡಿ.ಎ.ವಿ ಶಾಲೆ, ಎಸ್.ವಿ.ಎಂ ಕಾಲೇಜಿನ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss