Monday, September 21, 2020
Monday, September 21, 2020

Latest Posts

 ಔರಾದ್-ಬೀದರ ರಸ್ತೆ ದುರಸ್ತಿಗೆ 1.10 ಕೋಟಿ ರೂ. ಪ್ರಸ್ತಾವನೆ: ಸಚಿವ ಪ್ರಭು ಚವ್ಹಾಣ್

ಬೀದರ:  ಬೀದರ-ಔರಾದ ರಸ್ತೆ ಸರಿಪಡಿಸಲು 1.10 ಕೋಟಿ ರೂ.ಗಳು ಹಾಗೂ ಕೌಠಾ ಸೇತುವೆ ದುರಸ್ತಿಗೆ 2 ಕೋಟಿ ರೂ.ಗಳ ಪ್ರಸ್ತಾವನೆಯನ್ನು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಲಾಗಿದೆ ಎಂದು ಪಶು ಸಂಗೋಪನೆ, ವಕ್ಫ್,...

ಕೃಷಿ ವಿಧೇಯಕದಿಂದ ದೇಶದ ರೈತರ ಬಲ ಮತ್ತಷ್ಟು ಹೆಚ್ಚಳ: ಬಿಹಾರ ಸಿಎಂ ನಿತೀಶ್ ಕುಮಾರ್

ಪಾಟ್ನಾ: ಕೇಂದ್ರ ಸರ್ಕಾರದ ಜಾರಿಗೊಳಿಸಿದ ಕೃಷಿ ವಿಧೇಯಕ ದೇಶದ ಕೃಷಿ ವಲಯದ ಚಹರೆಯನ್ನು ಬದಲಿಸಲಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಈ ಮೂಲಕ ಕೃಷಿ ವಿಧೇಯಕಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇಂದು ಬಿಹಾರದಲ್ಲಿ...

ಕಳೆದ ನಾಲ್ಕು ವರ್ಷಗಳಲ್ಲಿ 2,120 ಪಾಕಿಸ್ತಾನಿ, 188 ಅಫ್ಘಾನಿಸ್ತಾನಿ, 99 ಬಾಂಗ್ಲಾದೇಶಿ ಪ್ರಜೆಗಳಿಗೆ ಭಾರತದ ಪೌರತ್ವ!

ಹೊಸದಿಲ್ಲಿ: ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ 2,120 ಪಾಕಿಸ್ತಾನಿ, 188 ಅಫ್ಘಾನಿಸ್ತಾನಿ ಮತ್ತು 99 ಬಾಂಗ್ಲಾದೇಶಿ ಪ್ರಜೆಗಳಿಗೆ ಭಾರತದ ಪೌರತ್ವ ನೀಡಲಾಗಿದೆ ಎಂದು ಕೇಂದ್ರ ಸರಕಾರ ಸೋಮವಾರ ರಾಜ್ಯಸಭೆಗೆ ಮಾಹಿತಿ ನೀಡಿದೆ. 2017ರಿಂದ ಈ...

ಶಾಲ್ಮಲೆಯ ಕೆಂಬಣ್ಣದ ಒಡಲಲ್ಲಿ ಕರಿಗಪ್ಪು ಲಿಂಗಗಳು: ವರ್ಣನೆಗೆ ನಿಲುಕದ ಸೊಬಗಿನ ಸಹಸ್ರಲಿಂಗ

sharing is caring...!

ಹಸಿರು ಹೊದಿಕೆಯ ಪಕ್ಕಕ್ಕೆ ಮಗ್ಗಿಲಾಗಿ ಶಾಂತ ಚಿತ್ತದಲಿ ಹೆಜ್ಜೆ ಹೆಜ್ಜೆಗೂ ಸಿಗುವ ಶಿವನಿಗೆ ಜಲಾಭಿಷೇಕ ಮಾಡಿ ತನ್ನ ಕಾಯಕ ಮುಗಿಯಿತೆಂದು ಗಮ್ಯ ಸ್ಥಳಕ್ಕೆ ಹೆಜ್ಜೆ ಹಾಕುವ ಶಾಲ್ಮಲಾ ನದಿ. ಮೇಘರಾಜ ನೀರಾಗಿ ಧರೆಗಿಳಿದಾಗ ಯಾರನ್ನೋ ಸೇರುವ ದಾವಂತದಲಿ ಬೊರ್ಗರೆಯುತ್ತಾ ಶಿವನ ಶಿಖೆಯ ಮೇಲಿನ ಗಂಗೆಯಾಗಿ ಉಕ್ಕುತ್ತಾಳೆ. ಕಣ್ಣೋಟದಿಂದ ತಪ್ಪಿಸಿಕೊಂಡು ವೈಯ್ಯಾರದಿ ಓಡುತ್ತಾಳೆ. ಪ್ರತಿ ಋತುಮಾನದಲ್ಲಿಯೂ ವೈವಿಧ್ಯತೆ ಮೆರೆದು ನೋಡುಗರನ್ನು ಬೆರಗು ಗೊಳಿಸುವಲ್ಲಿಗೆ ಆ ನದಿಗೂ ಸಾರ್ಥಕ ಭಾವ.

ಧಾರವಾಡದಲ್ಲಿ ಹುಟ್ಟಿ ಕಾನನದ ನಡುವಿನಲ್ಲಿ ಹರಿಯುವ ಶಾಲ್ಮಲಾನದಿ ತನ್ನ ಹರಿವಿನ ಉದ್ದಗಲಕ್ಕೂ ಹಲವಾರು ವೈಶಿಷ್ಟ್ಯಗಳಿಂದ ಸಳೆಯುತ್ತಾಳೆ. ಹೀಗೆ ವರ್ಷವಿಡಿ ಹರಿಯುವ ನದಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ-ಯಲ್ಲಾಪುರ ರಸ್ತೆಯ, ಶಿರಸಿಯಿಂದ ೧೨ ಕಿ.ಮೀ ದೂರದಲ್ಲಿನ ಹುಳಗೋಳದಲ್ಲಿ ತಿರುವು ತೆಗೆದುಕೊಂಡರೆ, ಅಲ್ಲಿಂದ ಒಂದು ಕಿಲೋಮೀಟರ್ ಅಂತರದಲ್ಲಿ ‘ಸಹಸ್ರಲಿಂಗ’ ಎಂಬ ಹೆಸರಿನೊಂದಿಗೆ ನೋಡುಗರನ್ನು ಆಕರ್ಷಿಸುತ್ತಾಳೆ. ಈ ತಾಣಕ್ಕೆ ಯಲ್ಲಾಪುರ ಮಾರ್ಗವಾಗಿಯೂ ಹೋಗಬಹುದು. ಈ ಸ್ಥಳ ಸೋಂದಾ ಮತ್ತು ಸ್ವರ್ಣವಲ್ಲಿ ಮಠಕ್ಕೆ ಹತ್ತಿರವಾಗಿದೆ.

ವಿಶೇಷತೆ:
ಇಲ್ಲಿ ಹೆಸರೇ ಹೇಳುವಂತೆ ಶಾಲ್ಮಲಾ ನದಿಯ ಒಡಲಿನಲ್ಲಿ ಸಾವಿರಾರು ವಿಭಿನ್ನ ಗಾತ್ರದ ಶಿವ ಲಿಂಗಗಳು ಕಾಣಿಸುತ್ತವೆ.‌‌ ರುದ್ರ ರೂಪಿ ಶಿವ ಉಳಿಯೇಟಿಗೆ ಬೆನ್ನೊಡ್ಡಿ ಸಹಸ್ರ ರೂಪ ಪಡೆದು ದೃಶ್ಯ ಕಾವ್ಯವಾಗಿ‌ ಶಾಲ್ಮಲೆಯ ಒಡಲಲ್ಲಿ ಮೈದಳೆದು ಕುಳಿತಿದ್ದಾನೆ. ನದಿಯ ನಡುವಲ್ಲಿಯೇ ಸಹಸ್ರ ರೂಪವಂತನ ಕಾವಲುಗಾರ ಎಂಬಂತೆ ತಲೆ ಎತ್ತಿ ಕುಳಿತಿರುವ ಬೃಹತ್ ಗಾತ್ರದ‌ ನಂದಿ ವಿಗೃಹವಿದೆ. ಪಾಂಡವರು ಬಳಸುತ್ತಿದ್ದರೆನ್ನಲಾದ ಒರಳು ಕಲ್ಲುಗಳು ಅಲ್ಲಲ್ಲಿ ಕಾಣಿಸುತ್ತವೆ. ಕಲ್ಲಿನ ಬಂಡೆಗಳ ಮೇಲೆ ಕಾಲಿಟ್ಟು ಜೀಕುತ್ತಾ ಸಾಗಿದರೇ ಕಿ.ಮೀ ದೂರದವರೆಗೂ ಶಿವಲಿಂಗದ ದರ್ಶನ ಪಡೆಯ‌‌ಬಹುದು. ಅಲ್ಲಿಯೇ ಪಕ್ಕಕ್ಕೆ ನದಿಗೆ ಅಡ್ಡಲಾಗಿ ಒಂದು ತೂಗು ಸೇತುವೆಯನ್ನು ನಿರ್ಮಾಣ ಮಾಡಲಾಗಿದೆ. ಈ ಸೇತುವೆಯು ಗರಿಷ್ಠ 25 ಜನರನ್ನು ಹೊರುವ ಸಾಮರ್ಥ್ಯವನ್ನು ಹೊಂದಿದೆ. ಸೇತುವೆಯ ಮೇಲಿಂದ ಸುತ್ತಲಿನ ಪ್ರಕೃತಿ ಸವಿಯುವುದೇ ಒಂದು ಕಾವ್ಯಮಯ‌‌‌ ಚೋದ್ಯ. ಕಣ್ ಕ್ಯಾಮರಾ ಕ್ಲಿಕ್ಕಿಸುತ್ತಾ ಶಾಲ್ಮಲೆಯ ಬಿನ್ನಾಣ ನೋಡುತ್ತಾ ಮೈಮರೆತರೇ‌ ಅವಳೊಂದಿಗೆ ಲೀನವಾದ ಭಾವ. ಇಂತಹ ಕ್ಷಣ ಮತ್ತೆಮತ್ತೇ ಎದುರಾಗಲಿ ಎಂದೆನಿಸುತ್ತದೆ.

ಇತಿಹಾಸ:
‌ಈ ಸ್ಥಳಕ್ಕೂ ಅದರದೇ ಆದ ಐತಿಹ್ಯವಿದೆ. ಕ್ರಿ.ಶ 1678-1718ರ ಸಮಯದಲ್ಲಿ ಆಳುತ್ತಿದ್ದ ಕೆಳದಿಯ ಅರಸನಾದ ಸದಾಶಿವರಾಯನು ಈ ಶಿವಲಿಂಗಗಳನ್ನು ಶಾಲ್ಮಲಾ ನದಿಯಲ್ಲಿನ ಲಿಂಗಗಳ ನಿರ್ಮಾತೃ ಎನ್ನಲಾಗಿದೆ. ಸದಾಶಿವರಾಯನು ಶಿವನ ಪರಮ ಭಕ್ತನಾಗಿದ್ದು ಈತ ಇಲ್ಲಿ ಹರಿದಿರುವ ಶಾಲ್ಮಲಾ ನದಿಯ ತಟದಲ್ಲಿನ ಕಪ್ಪು ಶಿಲೆಗಳ ಮೇಲೆ ಹಾಗೂ ನೀರೊಳಗಿರುವ ಕಲ್ಲುಗಳ ಮೇಲೂ ಹೀಗೆ ಎಲ್ಲೆಂದರಲ್ಲಿ ಶಿವಲಿಂಗಗಳನ್ನು ಕೆತ್ತಿಸಿದ್ದಾನೆ ಎಂದು ನಮಗೆ ಒಂದು ಇತಿಹಾಸದ ಮೂಲ ತಿಳಿಸಿದರೆ, ಇನ್ನೊಂದೆಡೆ ಈ ಜಾಗ ಶಿಲ್ಪ ಕಲಾ ತರಬೇತಿ ಕೇಂದ್ರವಾಗಿತ್ತು ಎನ್ನುವ ಪ್ರತೀತಿಯು ಇದೆ. ನದಿಯ ತಟದಲ್ಲೇಕೆ ಇಷ್ಟೊಂದು ಪ್ರಮಾಣದಲ್ಲಿ ಶಿವ ಮತ್ತು ನಂದಿ ವಿಗ್ರಹಗಳನ್ನು ಕೆತ್ತಿಸಿದ್ದಾನೆಂಬ ಪ್ರಶ್ನೆಗೆ ಉತ್ತರವಂತು ಸಿಗಲಿಲ್ಲ. ಆದರೂ ದೈವಿಕ ಪರಿಭಾವನೆಯ ದೃಷ್ಟಿಕೋನದಿಂದ ಊಹಿಸುವುದಾದಲ್ಲಿ, ಅರಸನು ಮಹಾನ್ ಶಿವ ಭಕ್ತನಾಗಿದ್ದು ತನ್ನ ಇಷ್ಟಾರ್ಥ ಸಿದ್ದಿಗಳು ಪಲಿಸಲೆಂದೋ,,,,,ತ್ರಿಕಾಲವೂ ಶಾಲ್ಮಲಾ ನದಿಯ ಪವಿತ್ರ ಜಲರಾಶಿಯಿಂದ ಅಭಿಷೇಕಗೊಳ್ಳುತ್ತಿರಬೇಕೆಂಬ ಮಹತ್ವಾಕಾಂಕ್ಷೆಯನ್ನು ಹೊಂದಿರಬಹುದೆಂದು ಅಂದಾಜಿಸಬಹುದು.

ವೈಶಿಷ್ಟ್ಯತೆ:
ಇಲ್ಲಿನ ಇನ್ನೊಂದು ವಿಶೇಷವೇನೆಂದರೆ ಈ ನದಿಯಲ್ಲಿ ಸ್ನಾನವನ್ನು ‌ಮಾಡಿದರೆ ಎಂಥಾ ರೋಗಗಳೇ ಇದ್ದರೂ ಗುಣವಾಗುತ್ತದೆಂದು ನಂಬಲಾಗಿದೆ. ಇದಕ್ಕೆ ಮುಖ್ಯ ಕಾರಣ ಈ ನದಿಯ ಸುತ್ತಲಿರುವ ಅರಣ್ಯದಲ್ಲಿ ಅಮೂಲ್ಯವಾದ ವನ ಔಷಧ ಮೂಲಿಕೆಗಳಿರುವುದರಿಂದ. ಸಂತಾನ ಇಲ್ಲದವರು ಈ ನದಿಯಲ್ಲಿ ಸ್ನಾನ ಮಾಡಿದರೆ ಸಂತಾನ ಪ್ರಾಪ್ತಿಯಾಗುತ್ತದೆ ಎಂದು ಅಲ್ಲಿನ ಸ್ಥಳೀಯರು ಗಾಢವಾಗಿ ನಂಬಿದ್ದಾರೆ. ಮತ್ತೊಂದು ಸೊಜಿಗವೆಂದರೆ ಶಾಲ್ಮಲಾ ಕಣಿವೆಯಲ್ಲಿ ಪೂಜೆಗೈದ ನಂತರ ಕಲ್ಲು ಬಂಡೆಯ ಮೇಲೆ ಅಥವಾ ಶಿವಲಿಂಗದ ಬಳಿ ಒಂದರ ಮೇಲೊಂದರಂತೆ‌ ಚಿಕ್ಕ ಕಲ್ಲುಗಳನ್ನು ಹೊಂದಿಸಿರುವುದು ಕಾಣಬಹುದು. ಯಾವ ಉದ್ದೇಶದಿಂದ ಈ ರೀತಿ ಮಾಡಲಾಗುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಕಾರಣಗಳಿಲ್ಲ. ಆದರೂ ಒಂದು ನಂಬಿಕೆಯ ಪ್ರಕಾರ ಭಕ್ತರು ಬೇಡುವ ಕೋರಿಕೆಗಳು ಈ ರೀತಿ ಮಾಡುವುದರಿಂದ ಸಿದ್ದಿಸುವುದೆಂಬುದು ಭಕ್ತರ ಮನದಿಂಗಿತ.

ಮಳೆಗಾಲದಲ್ಲಿ ನೀರಿನ ಹರಿವು‌ ಬಹಳ ಇರುವುದರಿಂದ ಮಳೆಗಾಲದಲ್ಲಿ ಇಲ್ಲಿಗೆ ಹೋಗುವುದು ಸೂಕ್ತವಲ್ಲ. ಮತ್ತು ಶಿವ ಲಿಂಗಗಳು ಸಹ ನೀರಿನ ರಭಸದ ಹರಿವಲ್ಲಿ ಮುಚ್ಚಿಕೊಂಡಿರುತ್ತದೆ. ಕಲ್ಲುಬಂಡೆಗಳೂ ಹಸಿರು ಗಟ್ಟಿ ಜಾರುತ್ತಿರುತ್ತದೆ. ಬೇಸಿಗೆಯಲ್ಲಿಯೇ ಇಲ್ಲಿಗೆ ಹೋಗಲು ಸೂಕ್ತ ಸಮಯ. ನೀರಿನ ಹರಿವು‌ ಕಡಿಮೆ ಇರುತ್ತದೆ ಹಾಗೇಯೇ ಎಲ್ಲಾ ಶಿವಲಿಂಗಗಳ ದರ್ಶನವು ಪಡೆಯಬಹುದು. ಶಿವರಾತ್ರಿಯಲ್ಲಿ ಸಹಸ್ರಲಿಂಗಕ್ಕೆ ಭಕ್ತಾದಿಗಳ ಸಾಲೇ ಹರಿದು ಬರುತ್ತದೆ. ನಿಲ್ಲುವುದಕ್ಕೂ ಪರದಾಡಬೇಕು. ಹಾಗಾಗಿ ವಿಶೇಷ ದಿನಗಳಲ್ಲಿ ಹೋಗುವುದಕ್ಕಿಂತ ಸಾದ ದಿನಗಳಲ್ಲಿ ಹೋದರೆ ಈಡೀ ಪ್ರದೇಶವನ್ನೂ ಸುತ್ತಾಡಬಹುದು. ಇಲ್ಲಿಗೆ ಒಬ್ಬಿಬ್ಬರು ಹೋಗುವದಕ್ಕಿಂತ ಗುಂಪು ಗುಂಪಾಗಿ ‌ಹೋದರೆ ಸೂರ್ಯಾಸ್ತದವರೆಗೂ ಬೇಸರವಿಲ್ಲದೇ ಪಕೃತಿಯ ಮಡಿಲಲ್ಲಿ ಕಾಲಕಳೆಯಬಹುದು. ಸುತ್ತಲಿನ ಹಸಿರು, ಪಕ್ಷಿಗಳ ಕಲರವ, ಸುವಾಸಿತ ಹೂವುಗಳು, ರಸಪೂರಿತ ಹಣ್ಣುಗಳು, ‌ಅವಸರವಿಲ್ಲದೇ ಹರಿಯುವ ಶಾಲ್ಮಲೆ. ಇವುಗಳೊಟ್ಟಿಗೆ ಜೊತೆಯಾದರೆ ಸೂರ್ಯ ಮೋಡದೊಳಗೆ ಪಲ್ಟಿ ಹೊಡೆದಾಗಲೇ ಮನೆಯ ದಾರಿ ನೆನಪಾಗುತ್ತದೆ.

ಅಗತ್ಯವಿದ್ದರೇ ಊಟ ಉಪಹಾರಗಳನ್ನು ನೀವೇ ತೆಗೆದುಕೊಂಡು ಹೋಗಬಹುದು. ಅಲ್ಲಿಯೇ ಕುಳಿತು ಊಟ ಮಾಡಲು‌ ಬೇಕಾದಷ್ಟು‌ ಜಾಗವಿದೆ.ಆದರೆ ಪರಿಸರದ ಸ್ವಚ್ಛತೆ ಕಾಪಾಡುವುದು ನಿಮ್ಮ ಜವಬ್ದಾರಿ. ಸಹಸ್ರಲಿಂಗದಲ್ಲಿಯೇ ಪುಟ್ಟದೊಂದು‌ ಹೋಟೆಲ್‌ ಇದೆ. ಊಟದ ವ್ಯವಸ್ಥೆ ಕೂಡ ಇದೆ. ಆದರೆ ವಸತಿಯ ವ್ಯವಸ್ಥೆ ಇಲ್ಲ. ವಸತಿ ಬೇಕಾದಲ್ಲಿ ಸೋಂದಾ ಅತಿಥಿ ಮಂದಿರಕ್ಕೆ ಅಥವಾ ಶಿರಸಿಗೆ ಹೋಗಬೇಕು. ಹಸಿರು ತೋಳುಗಳಲ್ಲಿ ದಿನವಿಡಿ ಕಳೆಯುವ ಆಸೆ ಇದ್ದರೆ ಸಹಸ್ರಲಿಂಗ ಅದಕ್ಕೆ ಸೂಕ್ತ ಸ್ಥಳ.

-ಕಾವ್ಯಾ ಜಕ್ಕೊಳ್ಳಿ

Latest Posts

 ಔರಾದ್-ಬೀದರ ರಸ್ತೆ ದುರಸ್ತಿಗೆ 1.10 ಕೋಟಿ ರೂ. ಪ್ರಸ್ತಾವನೆ: ಸಚಿವ ಪ್ರಭು ಚವ್ಹಾಣ್

ಬೀದರ:  ಬೀದರ-ಔರಾದ ರಸ್ತೆ ಸರಿಪಡಿಸಲು 1.10 ಕೋಟಿ ರೂ.ಗಳು ಹಾಗೂ ಕೌಠಾ ಸೇತುವೆ ದುರಸ್ತಿಗೆ 2 ಕೋಟಿ ರೂ.ಗಳ ಪ್ರಸ್ತಾವನೆಯನ್ನು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಲಾಗಿದೆ ಎಂದು ಪಶು ಸಂಗೋಪನೆ, ವಕ್ಫ್,...

ಕೃಷಿ ವಿಧೇಯಕದಿಂದ ದೇಶದ ರೈತರ ಬಲ ಮತ್ತಷ್ಟು ಹೆಚ್ಚಳ: ಬಿಹಾರ ಸಿಎಂ ನಿತೀಶ್ ಕುಮಾರ್

ಪಾಟ್ನಾ: ಕೇಂದ್ರ ಸರ್ಕಾರದ ಜಾರಿಗೊಳಿಸಿದ ಕೃಷಿ ವಿಧೇಯಕ ದೇಶದ ಕೃಷಿ ವಲಯದ ಚಹರೆಯನ್ನು ಬದಲಿಸಲಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಈ ಮೂಲಕ ಕೃಷಿ ವಿಧೇಯಕಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇಂದು ಬಿಹಾರದಲ್ಲಿ...

ಕಳೆದ ನಾಲ್ಕು ವರ್ಷಗಳಲ್ಲಿ 2,120 ಪಾಕಿಸ್ತಾನಿ, 188 ಅಫ್ಘಾನಿಸ್ತಾನಿ, 99 ಬಾಂಗ್ಲಾದೇಶಿ ಪ್ರಜೆಗಳಿಗೆ ಭಾರತದ ಪೌರತ್ವ!

ಹೊಸದಿಲ್ಲಿ: ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ 2,120 ಪಾಕಿಸ್ತಾನಿ, 188 ಅಫ್ಘಾನಿಸ್ತಾನಿ ಮತ್ತು 99 ಬಾಂಗ್ಲಾದೇಶಿ ಪ್ರಜೆಗಳಿಗೆ ಭಾರತದ ಪೌರತ್ವ ನೀಡಲಾಗಿದೆ ಎಂದು ಕೇಂದ್ರ ಸರಕಾರ ಸೋಮವಾರ ರಾಜ್ಯಸಭೆಗೆ ಮಾಹಿತಿ ನೀಡಿದೆ. 2017ರಿಂದ ಈ...

ಕಾಸರಗೋಡು ಜಿಲ್ಲೆಯಲ್ಲಿ ಅನ್ ಲಾಕ್-4 ಜಾರಿಗೆ: ಸಹಜ ಸ್ಥಿತಿಯತ್ತ ಜನಜೀವನ

ಕಾಸರಗೋಡು: ಜಿಲ್ಲೆಯಲ್ಲಿ ಕೊರೋನಾ ಹರಡುವಿಕೆಯ ಆತಂಕ ನೆಲೆಗೊಂಡಿರುವಂತೆಯೇ ಇನ್ನಷ್ಟು ಸಡಿಲಿಕೆ ಜಾರಿಗೆ ಬರುವುದರೊಂದಿಗೆ ಜನಜೀವನ ಸಹಜ ಸ್ಥಿತಿಗೆ ಮರಳತೊಡಗಿದೆ. ದೇಶದಲ್ಲಿ ಅನ್ ಲಾಕ್-4 ಸಡಿಲಿಕೆ ಸೋಮವಾರದಿಂದ ಜಾರಿಗೆ ಬಂದಿದೆ. ಅದರಂತೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ 100...

Don't Miss

 ಔರಾದ್-ಬೀದರ ರಸ್ತೆ ದುರಸ್ತಿಗೆ 1.10 ಕೋಟಿ ರೂ. ಪ್ರಸ್ತಾವನೆ: ಸಚಿವ ಪ್ರಭು ಚವ್ಹಾಣ್

ಬೀದರ:  ಬೀದರ-ಔರಾದ ರಸ್ತೆ ಸರಿಪಡಿಸಲು 1.10 ಕೋಟಿ ರೂ.ಗಳು ಹಾಗೂ ಕೌಠಾ ಸೇತುವೆ ದುರಸ್ತಿಗೆ 2 ಕೋಟಿ ರೂ.ಗಳ ಪ್ರಸ್ತಾವನೆಯನ್ನು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಲಾಗಿದೆ ಎಂದು ಪಶು ಸಂಗೋಪನೆ, ವಕ್ಫ್,...

ಕೃಷಿ ವಿಧೇಯಕದಿಂದ ದೇಶದ ರೈತರ ಬಲ ಮತ್ತಷ್ಟು ಹೆಚ್ಚಳ: ಬಿಹಾರ ಸಿಎಂ ನಿತೀಶ್ ಕುಮಾರ್

ಪಾಟ್ನಾ: ಕೇಂದ್ರ ಸರ್ಕಾರದ ಜಾರಿಗೊಳಿಸಿದ ಕೃಷಿ ವಿಧೇಯಕ ದೇಶದ ಕೃಷಿ ವಲಯದ ಚಹರೆಯನ್ನು ಬದಲಿಸಲಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಈ ಮೂಲಕ ಕೃಷಿ ವಿಧೇಯಕಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇಂದು ಬಿಹಾರದಲ್ಲಿ...

ಕಳೆದ ನಾಲ್ಕು ವರ್ಷಗಳಲ್ಲಿ 2,120 ಪಾಕಿಸ್ತಾನಿ, 188 ಅಫ್ಘಾನಿಸ್ತಾನಿ, 99 ಬಾಂಗ್ಲಾದೇಶಿ ಪ್ರಜೆಗಳಿಗೆ ಭಾರತದ ಪೌರತ್ವ!

ಹೊಸದಿಲ್ಲಿ: ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ 2,120 ಪಾಕಿಸ್ತಾನಿ, 188 ಅಫ್ಘಾನಿಸ್ತಾನಿ ಮತ್ತು 99 ಬಾಂಗ್ಲಾದೇಶಿ ಪ್ರಜೆಗಳಿಗೆ ಭಾರತದ ಪೌರತ್ವ ನೀಡಲಾಗಿದೆ ಎಂದು ಕೇಂದ್ರ ಸರಕಾರ ಸೋಮವಾರ ರಾಜ್ಯಸಭೆಗೆ ಮಾಹಿತಿ ನೀಡಿದೆ. 2017ರಿಂದ ಈ...
error: Content is protected !!