ಶಾವಿಗೆ ಪಾಯಸ ತಿಂದಿದ್ದೀರಾ, ಶಾವಿಗೆ ಉಪ್ಪಿಟ್ಟೂ ತಿಂದಿರಬಹುದು. ಆದರೆ ಶಾವಿಗೆ ಶಿರಾ ಯಾವತ್ತಾದರೂ ತಿಂದಿದ್ದೀರಾ. ಬಹಳ ಸರಳವಾಗಿ ಇದನ್ನು ಮಾಡಬಹುದು. ತಿನ್ನುವುದಕ್ಕೂ ರುಚಿ ಎನಿಸುತ್ತದೆ. ಇದನ್ನು ಮನೆಗೆ ಯಾರಾದರೂ ಬಂದಾಗ ಮಾಡಬಹದು, ಅಥವಾ ಊಟಕ್ಕೆ ಮಾಡಿಕೊಂಡು ತಿನ್ನಬಹುದು. ಹೇಗೆ ಮಾಡುವುದು ಎಂಬುದು ಇಲ್ಲಿದೆ ಓದಿ..
ಬೇಕಾಗುವ ಪದಾರ್ಥ:
ಶಾವಿಗೆ
ತುಪ್ಪ
ಹಾಲು
ಸಕ್ಕರೆ
ಡ್ರೈ ಫ್ರೂಟ್ಸ್
ಏಲಕ್ಕಿ
ಮಾಡುವ ವಿಧಾನ:
ಮೊದಲಿಗೆ ಕಾಲು ಕೆಜಿ ಶಾವಿಗೆ ತೆಗೆದುಕೊಳ್ಳಿ. ಅದಕ್ಕೆ ಅರ್ಧ ಕಪ್ ತುಪ್ಪಾ ಹಾಕಿ ಕೆಂಪಗೆ ಹುರಿದುಕೊಳ್ಳಿ. ಆನಂತರ ಅದಕ್ಕೆ ಸುಮಾರು 4 ಕಪ್ ಹಾಲು ಬೇಕಾಗುತ್ತದೆ. ಹಾಲನ್ನು ಹಾಕಿ ಬೇಯಿಸಿಕೊಳ್ಳಿ. ಪಾಯಸಕ್ಕಿಂತ ಹೆಚ್ಚು ಬೆಂದ ಮೇಲೆ ರುಚಿಗೆ ತಕ್ಕಷ್ಟು ಸಕ್ಕರೆ, ಸ್ವಲ್ಪ ಏಲಕ್ಕಿ , ಡ್ರೈ ಫ್ರೂಟ್ಸ್ ಹಾಕಿ ಬೇಯಿಸಿ. ರವೆ ಶಿರಾ ಹದಕ್ಕೆ ಬಂದ ಮೇಲೆ ಇಳಿಸಿ ಮುಚ್ಚಿಡಿ. ತಣ್ಣಗಾದ ಮೇಲೆ ತಿಂದರೆ ಶಾವಿಗೆ ಶಿರಾ ರುಚಿ ಕೊಡುತ್ತದೆ.