Thursday, July 7, 2022

Latest Posts

ಶಾಸಕರ ನಿವಾಸಕ್ಕೆ ನುಗ್ಗಿ ದಾಂಧಲೆ ಪ್ರಕರಣವನ್ನು ಕಾಂಗ್ರೆಸ್ ಶಾಸಕರೇ ಸಮರ್ಥಿಸಿಕೊಳ್ಳುವುದು‌ ನಾಚಿಕೆಗೇಡು: ಕರುಣಾಕರ ರೆಡ್ಡಿ

ಬಳ್ಳಾರಿ: ಕಾಂಗ್ರೆಸ್ ಶಾಸಕರ‌ ಮನೆಗೆ ಕಿಡಿಗೆಡಿಗಳು ನುಗ್ಗಿ ದಾಂಧಲೆ, ಧ್ವಂಸ ಮಾಡಿದ ಘಟನೆಯನ್ನು ಕಾಂಗ್ರೆಸ್ ನ ಕೆಲ ಶಾಸಕರೇ ಸಮರ್ಥಿಸಿಕೊಳ್ಳುತ್ತಿರುವುದು ನಾಚಿಕೆಗೇಡಿನ ವಿಚಾರ ಎಂದು ಹರಪನಹಳ್ಳಿ ಶಾಸಕ ಗಾಲಿ ಕರುಣಾಕರ ರೆಡ್ಡಿ ಅವರು ಹೇಳಿದರು. ಶಾಂತಿ ಪ್ರೀಯರ ನಾಡು ನಮ್ಮದು, ಅಶಾಂತಿಗೆ ಎಂದೂ ನಮ್ಮಲ್ಲಿ ಅವಕಾಶವಿಲ್ಲ. ಈ ಪ್ರಕರಣವನ್ನು ನಾನು ಕಟುವಾಗಿ ಖಂಡಿಸುವೆ. ಈ ಕುರಿತು ತನಿಖೆ‌ ನಡೆಸಿ ತಪ್ಪಿತಸ್ಥರು ಯಾರೇ ಇರಲಿ ಅವರಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು. ಈ ಘಟನೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಗಂಭೀರವಾಗಿ ಪರಿಗಣಿಸಿದ್ದು, ಖಂಡಿತ ತಪ್ಪಿತಸ್ಥರು ಯಾರೇ ಇರಲಿ ಕಠಿಣ ಕ್ರಮ ಕೈಗೊಳ್ಳಲಿದ್ದಾರೆ ಎಂದರು. ಕಾಂಗ್ರೆಸ್ ಶಾಸಕರಿಗೆ ತೊಂದರೆಯಾದರೆ, ಅವರೇ ಘಟನೆಯನ್ನು ಸಮರ್ಥಿಸಿಕೊಳ್ಳುತ್ತಾರೆ ಅಂದರೆ ನಾಚಿಗೆಯಾಗಬೇಕು ಅವರಿಗೆ, ಘಟನೆಯನ್ನು ಸಂಪೂರ್ಣ ತನಿಖೆಗೆ ಒಳಪಡಿಸಿ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು. ಸಚಿವ ಸಂಪುಟ ಪುನರ್ ರಚನೆ ಮಾಡಲಿದ್ದಾರೆ ಎನ್ನುವ ಮಾತುಗಳು ಹರಿದಾಡುತ್ತಿವೆ, ನಾನೂ ಸಚಿವ ಸ್ಥಾನದ‌ ಆಕಾಂಕ್ಷಿಯಾಗಿರುವೆ, ಎಲ್ಲದಕ್ಕೂ ಮುಖಂಡರ ತೀರ್ಮಾನದಂತೆ ನಡೆಯುವೆ. ಆದರೇ, ನಾನೂ ಸಚಿವ ಸ್ಥಾನದ ಪ್ರಭಲ ಆಕಾಂಕ್ಷಿಯಾಗಿರುವೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss