Wednesday, August 10, 2022

Latest Posts

ಶಾಸಕ ಆರಗ ಜ್ಞಾನೇಂದ್ರ ಜೇಬಿಗೆ ಕೈ ಹಾಕಿದ ಕಳ್ಳ! ಜನರಿಂದ ಹಿಗ್ಗಾಮುಗ್ಗಾ ಥಳಿತ

ಹೊಸ ದಿಗಂತ ವರದಿ, ಶಿವಮೊಗ್ಗ:

ಕಳ್ಳನೋರ್ವ ಶಾಸಕರ ಜೇಬಿಗೆ ಕತ್ತರಿ ಹಾಕಲು ಹೋಗಿ ಇದೀಗ ಆಸ್ಪತ್ರೆಗೆ ಸೇರಿರುವ ಘಟನೆ ತೀರ್ಥಹಳ್ಳಿಯಲ್ಲಿ ನಡೆದಿದೆ.
ಗುರುವಾರ ತೀರ್ಥಹಳ್ಳಿಯ ಟಿಎಪಿಸಿಎಂಎಸ್‌ನ ಚುನಾವಣೆ ಬೆಳಗ್ಗೆಯಿಂದ ಸಂಜೆವರೆಗೆ ನಡೆದಿತ್ತು. ರಾತ್ರಿ ವೇಳೆ ಫಲಿತಾಂಶ ಬಂದಿತ್ತು. ಈ ವೇಳೆ ಬಿಜೆಪಿ ನೇತೃತ್ವದ ಸಹಕಾರ ಭಾರತಿಯ ತಂಡ 10ಸ್ಥಾನಗಳ ಮೂಲಕ ಗೆಲುವು ಸಾಧಿಸಿತ್ತು.
ಆಗ ಬಿಜೆಪಿ ನಾಯಕರು, ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ವಿಜಯೋತ್ಸವದ ವೇಳೆ ಅಭಿಮಾನಿಗಳು, ಕಾರ್ಯಕರ್ತರು ಶಾಸಕ ಆರಗ ಜ್ಞಾನೇಂದ್ರರನ್ನು ಹೆಗಲ ಮೇಲೆ ಹೊತ್ತು ಕುಣಿಯಲು ಶುರು ಮಾಡಿದರು. ಇದೇ ಒಳ್ಳೆಯ ಸಮಯ ಎಂದು ಸಮಯಕಾದ ಭದ್ರಾವತಿ ಮೂಲದ ಕಳ್ಳನೊಬ್ಬ ಶಾಸಕರ ಜೇಬಿಗೆ ಕೈಹಾಕಿ ಹಣ ಕದಿಯಲು ಯತ್ನಿಸಿದ್ದಾನೆ. ಇದನ್ನು ಗಮನಿಸಿದ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಕಳ್ಳನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಳಿಕ ಆತನನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದು,
ತೀರ್ಥಹಳ್ಳಿಯ ಜೆ.ಸಿ.ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss