Thursday, July 7, 2022

Latest Posts

ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಅಪ್ಪಟ ಶ್ರೀರಾಮ ಭಕ್ತ: ಡಿ. 25ರಂದು ಪಾದಯಾತ್ರೆ

ಹೊಸದಿಗಂತ ವರದಿ,ಬಳ್ಳಾರಿ:

ನಗರ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಅವರು ರಾಜಕೀಯ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿ ಗಮನ ಸೆಳೆದಿದ್ದಾರೆ. ಇದರ ಜೊತೆಗೆ ಅಧ್ಯಾತ್ಮಿಕದಲ್ಲೂ ಇತರರಿಗೆ ಮಾದರಿಯಾಗಿದ್ದು, ಪಕ್ಕ ಶ್ರೀರಾಮನ ಭಕ್ತರಾಗಿದ್ದಾರೆ. ಇದಕ್ಕೆ ಪೂರಕವೆಂಬಂತೆ ನಗರದ ಶ್ರೀ ಬಾಲಾಂಜಿನೆಯ ಸ್ವಾಮಿ ದೇಗುಲದಲ್ಲಿ ಹನುಮ ಮಾಲೆ ಧರಿಸಿ ಕಸಾಪೂರ ಶ್ರೀ ಆಂಜಿನೇಯ ಸ್ವಾಮಿ ದೇಗುಲದವರೆಗೆ ಪಾದಯಾತ್ರೆ ನಡೆಸಿ, ಹನುಮನ ಸೇವೆ, ಪ್ರಾರ್ಥನೆ ಮಾಡಲು ಮುಂದಾಗಿದ್ದಾರೆ.

ಡಿ. 25 ರಂದು ಸಂಜೆ 4.30ಕ್ಕೆ ಪಾದಯಾತ್ರೆಗೆ ಚಾಲನೆ‌ ನೀಡಲಿದ್ದಾರೆ. ನಗರದಿಂದ ನೆರೆಯ ಆಂದ್ರದ ಪ್ರಸಿದ್ಧ ದೇಗುಲ ಕಸಾಪೂರ ಶ್ರೀ ಆಂಜನೇಯ ದೇಗುಲದವರೆಗೆ ಪಾದಯಾತ್ರೆ ‌ನಡೆಸಲಿದ್ದು, ಈ ಕ್ಷೇತ್ರದಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಇವರೊಂದಿಗೆ ಅನೇಕ ಹನುಮ ಭಕ್ತರು ಭಾಗವಹಿಸಿ ವಾಯುದೇವರನ್ನು ಸ್ಮರಿಸಲಿದ್ದಾರೆ. ಡಿ.25ರಂದು ಸಂಜೆ 4.30ಕ್ಕೆ ನಗರದ ಬಾಲಾಂಜಿನೇಯ ಸ್ವಾಮೀ ದೇಗಲದಿಂದ ಹೊರಟು, ಸಮೀಪ ಪವಿತ್ರ ಪುಣ್ಯ ಕ್ಷೇತ್ರ ಚೆಳ್ಳಗುರ್ಕಿ ಶ್ರೀ ಎರ್ರಿಸ್ವಾಮೀ ತಾತನವರ ಮಠದ ಆವರಣದಲ್ಲಿ ತಂಗಲಿದ್ದಾರೆ.

ಮರು ದಿನ ಬೆಳಿಗ್ಗೆ ಕಸಾಪೂರ ಶ್ರೀ ಆಂಜಿನೇಯ ಸ್ವಾಮೀ ದರ್ಶನ ‌ಪಡೆದು ವಿಶೇಷ ಪೂಜೆ, ಅರ್ಚನೆ ಸಲ್ಲಿಸಿ ಭಕ್ತಿ ಸಮರ್ಪಿಸಲಿದ್ದಾರೆ. ಆಸಕ್ತ ಶ್ರೀರಾಮ ಭಕ್ತರು ಪಾದಯಾತ್ರೆಯಲ್ಲಿ ಭಾಗವಹಿಸಬಹುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss