ಬೆಂಗಳೂರು: ಶಾಸಕ ಜಮೀರ್ ಅಹ್ಮದ್ ಹುಟ್ಟುಹಬ್ಬದ ಪಾರ್ಟಿಯಲ್ಲಿ ಬಾಲಿವುಡ್ ನಟರು ಪಾಲ್ಗೊಂಡಿದ್ದರು ಎಂದು ಪ್ರಶಾಂತ್ ಸಂಬರಗಿ ಹೇಳಿದ್ದಾರೆ.
ಬರ್ಥಡೇ ಪಾರ್ಟಿಯಲ್ಲಿ ಬಾಲಿವುಡ್ ನಟರಾದ ಸಂಜಯ್ ದತ್,ಜಾಕಿಶ್ರಾಫ್, ಶಕ್ತಿ ಕಪೂರ್, ಅಫ್ತಾಬ್ ಶಿವದಾಸನಿ ಸೇರಿದಂತೆ ಹಲವರು ಇದ್ದರು ಎಂದು ಹೇಳಿದ್ದಾರೆ.
ಇಂದು ಸಿಸಿಬಿ ವಿಚಾರಣೆಗೆ ಮುನ್ನ ಮಾತನಾಡಿ, ಶ್ರೀಲಂಕಾದಲ್ಲಿ ನಡೆದ ಪಾರ್ಟಿಯಲ್ಲಿ ಬಾಲಿವುಡ್ ನಟರು ಇದ್ದಾರೆ. ಇದು ಸುಳ್ಳು ಎನ್ನುವುದಾದರೆ 2019 ಜೂನ್ 8,9,10 ರಲ್ಲಿ ಜಮೀರ್ ಎಲ್ಲಿದ್ದರು? ಅವರ ವೀಸಾ ತೋರಿಸಿ ಬಹಿರಂಗವಾಗಿ ಹೇಳಿಕೆ ನೀಡಲಿ ಎಂದು ಸವಾಲು ಹಾಕಿದ್ದಾರೆ.