Tuesday, June 28, 2022

Latest Posts

ಶಾಸಕ ಡಾ.ಭರತ್ ಶೆಟ್ಟಿಯವರಿಂದ ನಿಧಿ ಸಮರ್ಪಣಾ ಅಭಿಯಾನ

ಹೊಸದಿಗಂತ ವರದಿ,ಮಂಗಳೂರು:

ದೇಶದ ಅಸ್ಮಿತೆಯ ಪ್ರತೀಕವಾಗಿರುವ ಭವ್ಯ ರಾಮ ಮಂದಿರವನ್ನು ಭಗವಂತ ಶ್ರೀ ರಾಮಚಂದ್ರನ ಜನ್ಮಸ್ಥಾನವಾಗಿರುವ ಅಯೋಧ್ಯೆಯಲ್ಲಿ ಕಣ್ತುಂಬಿಕೊಳ್ಳಲು ದೇಶದ ಪ್ರಜೆ ಕಾತರದಿಂದ ಕಾಯುತ್ತಿದ್ದಂತೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯರ ಮಾರ್ಗದರ್ಶನದಲ್ಲಿ ಪರಿವಾರದ ಕಾರ್ಯಕರ್ತರು ನಿಧಿ ಸಮರ್ಪಣಾ ಅಭಿಯಾನದಲ್ಲಿ ಭಾಗವಹಿಸುತ್ತಿದ್ದಾರೆ.

ಈ ಅಭಿಯಾನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಶಾಸಕರಾದ ಡಾ‌ವೈ ಭರತ್ ಶೆಟ್ಟಿಯವರು ಪಚ್ಚನಾಡಿ,ಕಾವೂರು ಭಾಗದ ವಿವಿಧ ಕಡೆ ಮನೆಮನೆಗಳಿಗೆ ತೆರಳಿ ನಿಧಿ ಸಮರ್ಪಣಾ ಅಭಿಯಾನದಲ್ಲಿ ತೊಡಗಿಸಿಕೊಂಡರು.

ಶಾಸಕರ ಜೊತೆಗೆ ಮಂಡಲ ಪ್ರಧಾನ ಕಾರ್ಯದರ್ಶಿ ಸಂದೀಪ್ ಪಚ್ಚನಾಡಿ, ಜಿಲ್ಲಾ ಕಾರ್ಯದರ್ಶಿ ಪೂಜಾ ಪೈ, ಸ್ಥಳೀಯ ಕಾರ್ಪೊರೇಟರ್ ಗಳಾದ ಸಂಗೀತಾ ಆರ್ ನಾಯಕ್, ಸುಮಂಗಲಾ ರಾವ್, ಪ್ರಮುಖರಾದ ಪ್ರಶಾಂತ್ ಪೈ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss