Wednesday, August 17, 2022

Latest Posts

ಶಾಸಕ ನಾರಾಯಣರಾವ ನಿಧನಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಖಂಡ್ರೆ ಸಂತಾಪ

ಭಾಲ್ಕಿ: ಶರಣರ ನಾಡು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ನಾರಾಯಣರಾವ ನಿಧನಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರು ಸಂತಾಪ ಸೂಚಿಸಿದ್ದಾರೆ.
ಶಾಸಕ ನಾರಾಯಣರಾವ್ ಕೋವಿಡ್ -19 ಮತ್ತು ಬಹು ಅಂಗಾಗ ವೈಫಲ್ಯದಿಂದ ಮೃತಪಟ್ಟಿರುವ ವಿಷಯ ತಿಳಿದು ವೈಯಕ್ತಿಕವಾಗಿ ತೀವ್ರ ದುಖವಾಗಿದೆ.
ಸಜ್ಜನ ಮತ್ತು ಸ್ನೇಹಜೀವಿಯಾಗಿದ್ದ ನಾರಾಯಾಣರಾವ ನಿಧನದಿಂದ ರಾಜ್ಯಕ್ಕೆ, ಬೀದರ್ ಜಿಲ್ಲೆಗೆ, ಬಸವ ಕಲ್ಯಾಣದ ಜನತೆಗೆ ತುಂಬಲಾರದ ನಷ್ಟವಾಗಿದೆ.
ಬಸವಾದಿ ಶರಣರ ತತ್ವದಲ್ಲಿ ಅಪಾರ ನಂಬಿಕೆ ಇಟ್ಟುಕೊಂಡಿದ್ದ ಅವರು ಬಸವಕಲ್ಯಾಣವನ್ನು ಅಂತರರಾಷ್ಟ್ರೀಯ ಪ್ರವಾಸಿ ತಾಣವಾಗಿ ಮಾಡುವ ಕನಸು ಹೊತ್ತಿದ್ದರು. ಹೋರಾಟದ ಮೂಲಕ ಮೊದಲ ಬಾರಿಗೆ ಶಾಸಕರಾಗಿದ್ದ ಅವರು ಬಸವಕಲ್ಯಾಣ ಅಭಿವೃದ್ಧಿಗೆ ನಾನಾ ಯೋಜನೆ ರೂಪಿಸಿದ್ದರು. ಆದರೆ ಅವರ ಹಠಾತ್ ನಿಧನ ಆಘಾತ ಉಂಟುಮಾಡಿದೆ. ಅವರ ಕುಟುಂಬದವರಿಗೆ ದುಖ ತಡೆದು ಕೊಳ್ಳುವ ಶಕ್ತಿ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ. ಸಂತಾಪ ಸೂಚಿಸಿದ್ದಾರೆ.

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!