Wednesday, July 6, 2022

Latest Posts

 ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದ್ದೆಲ್ಲವೂ ವೇದವಾಕ್ಯವಲ್ಲ: ಸಚಿವ ಬಿ. ಸಿ. ಪಾಟೀಲ್

ಕೊಪ್ಪಳ: ಪದೆ ಪದೆ ರಾಜ್ಯ ಸರ್ಕಾರದ ವಿರುದ್ದ ಹಾಗೂ ಉತ್ತರ ಕನ್ನಡ ನಿರ್ಲಕ್ಷ್ಯ ಮಾಡಿದ್ದಾರೆ ಎಂಬ ಆರೋಪಿಸಿದ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ ಅವರು ಹೇಳುವುದೆಲ್ಲ ವೇದವಾಕ್ಯವಲ್ಲ ಎಂದು ಕೃಷಿ‌ ಸಚಿವ ಬಿ ಸಿ ಪಾಟೀಲ್ ಹೇಳಿದರು.
ಕೊಪ್ಪಳದಲ್ಲಿ ಉಕ ಭಾಗಕ್ಕೆ ನೆರೆ ಪರಿಹಾರ ಹಂಚಿಕೆಯಲ್ಲಿ ರಾಜ್ಯ ಸರ್ಕಾರ ಮತ್ತೆ ತಾರತಮ್ಯ ಮಾಡಿದೆ ಎನ್ನುವ ಶಾಸಕ ಯತ್ನಾಳ ಹೇಳಿಕೆಗೆ ಕೊಪ್ಪಳದಲ್ಲಿ ಬಿ ಸಿ ಪಾಟೀಲ್ ಈ ರೀತಿ ಟಾಂಗ್ ನೀಡಿದರು.
ಯತ್ನಾಳ ಹೇಳಿದಾಕ್ಷಣ ಎಲ್ಲವೂ ವೇದವಾಕ್ಯವಲ್ಲ. ನೆರೆ ಪರಿಹಾರ ವಿತರಣೆಯ ಪಟ್ಟಿಯನ್ನ ನೋಡಬೇಕು. ಏಲ್ಲಿ ಏಷ್ಟು ನೆರೆ ಹಾನಿಯಾಗಿದೆ. ಅಧಿಕಾರಿಗಳು ಏಷ್ಟು ವರದಿ ಕೊಟ್ಟಿದ್ದಾರೆ. ಸುಮ್ಮನೆ ಮೂಗುಮ್ಮಾಗಿ ಹೇಳೋದು ಸರಿಯಲ್ಲ ಎಂದರು.
ಇಷ್ಟಾದರೂ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಪ್ರಶ್ನೇಗೆ ಉತ್ತರಿಸಿದ ಅವರು, ಶಾಸಕ ಯತ್ನಾಳ ಅವರ ಮೇಲೆ ಸಮಯ ಬಂದಾಗ ಸಂಬಂಧಿಸಿದವರು ಕಂಡಿತ ಕ್ರಮ‌ಕೈಗೊಳ್ಳುತ್ತಾರೆ ಎಂದರು.
17 ಶಾಸಕರ ಭವಿಷ್ಯ ಎಕ್ಕೂಟ್ಟೂ ಹೋಗುತ್ತೆ ಎಂದಿರುವ ಮಾಜಿ‌ ಸಿಎಂ ಸಿದ್ದು ಅವರು, ಮೊದಲು ತಮ್ಮ ಸ್ಥಾನವನ್ನ ಭದ್ರ ಮಾಡಿಕೊಳ್ಳಲಿ. ತಮ್ಮ ಭವಿಷ್ಯ ಏನಾಗಲಿದೆ ಎನ್ನುವುದನ್ನು ನೋಡಿಕೊಳ್ಳಲಿ ಎಂದರು.
ಆರ್ ಆರ್ ನಗರ, ಶಿರಾ ಸೇರಿ ನಾಲ್ಕೂ ವಿಧಾನ ಪರಿಷತ್ ಕ್ಷೇತ್ರನೂ ನಾವು ಗೆಲ್ಲುತ್ತೇವೆ. ಅದ್ಭುತ ಸ್ಪಂದನೆ ಸಿಕ್ಕಿದೆ.
ಇನ್ನೂ ಭತ್ತದ ಬೆಂಬಲ ಬೆಲೆ ನಿಗಧಿಯಾಗಿದೆ. ನ.೦೧ ರಿಂದ ನ.೩೦ ರ ವರೆಗೂ ಖರೀದಿಗೆ ನೊಂದಣಿ ನಡೆಯುತ್ತದೆ. ನಂತರ ಖರೀದಿ ಆರಂಭ ಮಾಡಲಿದ್ದೇವೆ. ಮೆಕ್ಕೆಜೋಳ ಖರೀದಿ ಪಡಿತರ ವ್ಯವಸ್ಥೆಯಡಿ ಬರುವುದಿಲ್ಲ. ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೀವಿ. ಪಡಿತರ ವ್ಯವಸ್ಥೆಯಡಿ ತನ್ನಿ ಎಂದು, ಕೇಂದ್ರದಿಂದ ಎಂಎಸ್ ಪಿಯಡಿ ಖರೀದಿ ಮಾಡಿ ಎಂದರೆ ನಾವು ಖರೀದಿ ಮಾಡಲಿದ್ದೇವೆ ಎಂದರು.
ಗಂಗಾವತಿ ನಗರಸಭೆ ಸದಸ್ಯನ ಕಿಡ್ನ್ಯಾಪ್ ವಿಚಾರ ರಾಜಕೀಯದಲ್ಲಿ ಅವೆಲ್ಲವೂ ಸಹಜ, ಕಿಡ್ನ್ಯಾಪ್ ಆಗ್ತಾರೆ. ಮತ್ತೆ ಬರ್ತಾರೆ. ಗಂಗಾವತಿ ಪ್ರಕರಣದಲ್ಲಿ ಪೊಲೀಸ್ ತನಿಖೆಯಲ್ಲಿ ಅದು ಗೊತ್ತಾಗಲಿದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss