ಬೈಂದೂರು: ಶಾಸಕರಾದ ಬಿ. ಎಮ್. ಸುಕುಮಾರ ಶೆಟ್ಟಿಯವರ ಶಿಫಾರಸ್ಸಿನ ಮೇರೆಗೆ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ಅನುದಾನದಡಿ ಬೆಳ್ಳಾಲ ಗ್ರಾಮದ ನಿವಾಸಿಯಾದ ಪ್ರಭಾಕರ ಬಿನ್ ಮಂಜುನಾಥ ಆಚಾರ್ಯ ಮತ್ತು ಗುಲ್ವಾಡಿ ಗ್ರಾಮದ ಕಲಕಂಬ ನಿವಾಸಿಯಾದ ಸುದೀಪ ಬಿನ್ ಶಿವರಾಮ ಪೂಜಾರಿ ಇವರಿಗೆ ತಲಾ 83,000 ರೂ. ಮೊತ್ತದ ಯಂತ್ರಚಾಲಿತ ತ್ರಿಚಕ್ರ ವಾಹನವನ್ನು ನೀಡಲಾಯಿತು.