Saturday, August 13, 2022

Latest Posts

ಶಾಹಿ ಗಾರ್ಮೆಂಟ್ಸ್ ಕಾರ್ಖಾನೆಯ ಕಾರ್ಮಿಕರಿಗೆ ಸೋಂಕು: ಸೀಲ್ ಡೌನ್‌ಗೆ ಆಗ್ರಹಿಸಿ ಗ್ರಾಮಸ್ಥರಿಂದ ಪ್ರತಿಭಟನೆ

ಮೈಸೂರು: ಮಹಾಮಾರಿ ಕೊರೋನಾ ವೈರಾಣು ಸೋಂಕು ಇದೀಗ ಮೈಸೂರು ಜಿಲ್ಲೆಯಲ್ಲಿರುವ ಕಾರ್ಖಾನೆಗಳ ಕಾರ್ಮಿಕರಲ್ಲಿ ಹರಡಲು ಶುರು ಮಾಡಿದೆ. ಜನ ಸಾಮಾನ್ಯರಲ್ಲಿ ಹರಡುತ್ತಿದ್ದ ಈ ಸೋಂಕು ಈಗ ಕಾರ್ಖಾನೆಗಳಿಗೆ ವಕ್ಕರಿಸುತ್ತಿರುವುದು ಜನರಲ್ಲಿ ತೀವ್ರ ಆತಂಕವನ್ನುAಟು ಮಾಡಿದೆ. ನಂಜನಗೂಡಿನ ಜುಬಿಲಿಯಂಟ್ ಔಷಧ ಕಾರ್ಖಾನೆ ಬಳಿಕ ಅತಿ ಹೆಚ್ಚು ಸೋಂಕು ಹರಡುವಿಕೆ ಮೈಸೂರಿನ ಜೆ.ಕೆ.ಟೈರ್ಸ್ ಕಾರ್ಮಿಕರಲ್ಲಿ ಹರಡಿದೆ. ಹರಡುತ್ತಾ ಹೋಗುತ್ತಿದೆ.

ಇದರ ಬೆನ್ನಲ್ಲೇ ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನ ನೀಲಸೋಗೆ ಗ್ರಾಮದಲ್ಲಿರುವ ಶಾಹಿ ಗಾರ್ಮೆಂಟ್ಸ್ ಕಾರ್ಖಾನೆಗೂ ಸೋಂಕು ದಾಂಗುಡಿಯಿಟ್ಟಿದೆ. ಕಾರ್ಖಾನೆಯ ಕಾರ್ಮಿಕರೊಬ್ಬರಿಗೆ ಸೋಂಕಿರುವುದು ಪರೀಕ್ಷೆಯಿಂದ ದೃಢಪಟ್ಟಿದೆ. ಇದರಿಂದಾಗಿ ಇಡೀ ತಿ.ನರಸೀಪುರ ತಾಲೂಕಿನ ಗ್ರಾಮಗಳ ಜನರಲ್ಲಿ ಸೋಂಕು ಹರಡುವ ಭೀತಿಯುಂಟಾಗಿದೆ. ಈ ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮೂಗೂರು ಗ್ರಾಮದ ಕಾರ್ಮಿಕರೊಬ್ಬರಿಗೆ ಸೋಂಕಿರುವುದು ದೃಢಪಟ್ಟಿರುವ ಹಿನ್ನಲೆಯಲ್ಲಿ ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಮೂರು ಸಾವಿರ ಕಾರ್ಮಿಕರಿಗೆ ಸೋಂಕಿನ ಭೀತಿ ಎದುರಾಗಿದೆ.

ಇಷ್ಟು ಮಾತ್ರವಲ್ಲ, ಸೋಂಕಿತ ಜೊತೆ ಸಂಪರ್ಕ ಹೊಂದಿದ್ದ ೮ ಮಂದಿಯನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ. ಹೀಗಾಗಿ ನೀಲಸೋಗೆ ಗ್ರಾಮ, ಮೂಗೂರು ಗ್ರಾಮ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಸೋಂಕು ಹರಡುವ ಆತಂಕ ಎದುರಾಗಿದೆ. ಇದಕ್ಕೆ ಮತ್ತೊಂದು ಕಾರಣವೂ ಇದೆ. ಕಾರ್ಖಾನೆಯಲ್ಲಿ ಕಾರ್ಮಿಕರೊಬ್ಬರಿಗೆ ಸೋಂಕಿರುವುದು ದೃಢಪಟ್ಟಿದ್ದರೂ, ಕಾರ್ಖಾನೆಯನ್ನು ಸೀಲ್‌ಡೌನ್ ಮಾಡಿಲ್ಲ. ಇದು ನೀಲಸೋಗೆ ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಿದೆ.

ಕಾರ್ಖಾನೆಯ ಮುಂದೆ ಜಮಾಯಿಸಿದ ಸ್ಥಳೀಯರು ಕೊರೋನಾ ಸೋಂಕು ಹರಡುವಿಕೆ ತಡೆಯಲು ಕೂಡಲೇ ಕಾರ್ಖಾನೆಯನ್ನು ಸೀಲ್‌ಡೌನ್ ಮಾಡಬೇಕು, ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಎಲ್ಲಾ ಕಾರ್ಮಿಕರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕು, ಸೋಂಕಿತರಿಗೆ ಸೂಕ್ತ ಚಿಕಿತ್ಸೆಯನ್ನು ಕಾರ್ಖಾನೆಯ ಆಡಳಿತ ಮಂಡಳಿಯಿAದಲೇ ಕೊಡಿಸಬೇಕು ಎಂದು ಪಟ್ಟು ಹಿಡಿದು ಪ್ರತಿಭಟನೆ ನಡೆಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss