ಬೆಂಗಳೂರು : ಸೆಪ್ಟೆಂಬರ್ 05 ರ ‘ಶಿಕ್ಷಕರ ದಿನಾಚರಣೆ’ಯನ್ನು ವಿಶೇಷವಾಗಿ ಆಚರಣೆ ಮಾಡುವ ನಿಟ್ಟಿನಲ್ಲಿ ಅಂಚೆ ಇಲಾಖೆ ‘ಗುರುವಂದನಾ’ ಸೇವೆಯನ್ನು ಆರಂಭಿಸಲಾಗಿದೆ.
ನೆಚ್ಚಿನ ಗುರುಗಳಿಗೆ ಅಭಿನಂದನೆ ಹಾಗೂ ವಿಶೇಷ ಉಡುಗೊರೆಯನ್ನು ಅಂಚೆ ಇಲಾಖೆಯ ವೆಬ್ ಸೈಟ್ ಮುಖಾಂತರ ಕಳುಹಿಸಬಹುದು ಎಂದು ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.
ಅಂಚೆ ಇಲಾಖೆಯ https://www.karnatakapost.gov.in/Guru_Vandana ವೆಬ್ ಸೈಟ್ ಗೆ ಭೇಟಿ ನೀಡಿ ಅಲ್ಲಿ ನಮೂದಾಗಿರುವ ಅಕೌಂಟ್ಗೆ 100 ರೂ.ಗಳನ್ನು ಆನ್ ಲೈನ್ ಮೂಲಕ ಪಾವತಿಸಿ (ಬೇರೆ ಮೂಲಗಳಿಂದ), ಪಾವತಿಯಾದ ಟ್ರಾನ್ಸಾಕ್ಷನ್ ರೆಫೆರೆನ್ಸ್ ನಂಬರನ್ನು ಹಾಗೂ ಪಾವತಿಸಿದ ದಿನಾಂಕಗಳನ್ನು ನಮೂದಿಸಿ, ಉಡುಗೊರೆಯನ್ನು ಆಯ್ಕೆ ಮಾಡಿಕೊಳ್ಳಿರಿ.
ಕಳುಹಿಸುವವರ ವಿಳಾಸ ಹಾಗೂ ಸ್ವೀಕರಿಸುವವರ ವಿಳಾಸ ನಮೂದಿಸಿ ಸಬ್ಮಿಟ್ ಮಾಡಬೇಕು. ತಕ್ಷಣ ನಿಮ್ಮ ಮೊಬೈಲ್ ನಂಬರಿಗೆ ಒಂದು ಸಂದೇಶ ಬರುತ್ತದೆ ಹಾಗೂ ನಿಮ್ಮ ಉಡುಗೊರೆ ನಿಮ್ಮ ಪ್ರೀತಿಯ ಶಿಕ್ಷಕರಿಗೆ ನಿಮ್ಮ ಸಂದೇಶದ ಜೊತೆಗೆ “ಸ್ಪೀಡ್ ಪೋಸ್ಟ್” ಮುಖಾಂತರ ತಲುಪುತ್ತದೆ.
ಭಾರತೀಯ ಅಂಚೆ ಇಲಾಖೆಯು ಆನ್ ಲೈನ್ “ರಾಖಿ ಪೋಸ್ಟ್” ಪರಿಚಯಿಸಿ ಯಶಸ್ವಿ ಕಂಡ ಹಿನ್ನೆಲೆಯಲ್ಲಿ ಗುರುವಂದನಾ ಸೇವೆಯನ್ನು ಆರಂಭಿಸಿದೆ