Sunday, August 14, 2022

Latest Posts

ಶಿಕ್ಷಕರ ಹಿತರಕ್ಷಣೆಗೆ ಅಗತ್ಯವಿರುವ ಎಲ್ಲ ಕಾರ್ಯಗಳನ್ನು ಮಾಡಿದ್ದೇನೆ: ಪುಟ್ಟಣ್ಣ

ರಾಮನಗರ: ಶಿಕ್ಷಕರ ವರ್ಗಾವಣೆ, ಬಡ್ತಿ ವಿಚಾರ, ಶಿಕ್ಷಣ ಸಂಸ್ಥೆಗಳಿಗೆ ಸಮಸ್ಯೆ, ಕಾಲಕಾಲಕ್ಕೆ ಸರ್ಕಾರ ತರುತ್ತಿದ್ದ ಅವೈಜ್ಞಾನಿಕ ನಿಯಮಗಳ ವಿರುದ್ದ ಹೋರಾಟ ಮಾಡಿದ್ದೇನೆ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಪುಟ್ಟಣ್ಣ ತಿಳಿಸಿದರು.

ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಶಿಕ್ಷಕರಿಗೆ ಸಮಸ್ಯೆಯಾದಾಗ ನಮ್ಮದೇ ಸರ್ಕಾರದ ವಿರುದ್ದವೂ ಪ್ರತಿಭಟನೆ ಮಾಡಿದ್ದೇನೆ, ಇದರಲ್ಲಿ ಯಾವುದೇ ರಾಜಿಯಾಗಿಲ್ಲ, ಶಿಕ್ಷಕರ ಹಿತರಕ್ಷಣೆಗೆ ಅಗತ್ಯವಿರುವ ಎಲ್ಲ ಕಾರ್ಯಗಳನ್ನು ಮಾಡಿದ್ದೇನೆ ಎಂದರು. ಪ್ರತಿ ಸಂದರ್ಭದಲ್ಲೂ ಹೋರಾಟದ ಮೂಲಕವೇ ಯಶಸ್ಸು ಕಂಡಿದ್ದೇನೆ, ಈ ಕ್ಷೇತ್ರದ ಅಭಿವೃದ್ದಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ, ಶಿಕ್ಷಕರ ಕ್ಷೇತ್ರದ ಸ್ವಾಭಿಮಾನ ಎತ್ತಿ ಹಿಡಿದಿದ್ದೇನೆ.

ಶಿಕ್ಷಕ ಇಡೀ ಶಿಕ್ಷಕ ಸಮುದಾಯ ನನ್ನ ಬೆನ್ನ ಹಿಂದೆ ಇದೆ. ಆತ್ಮವಿಶ್ವಾಸ ತುಂಬುತ್ತಿದೆ, ತಮ್ಮ ಹದಿನೆಂಟು ವರ್ಷಗಳ ಅಧಿಕಾರದ ಅವಧಿಯಲ್ಲಿ ಶಿಕ್ಷಕರು, ಶಿಕ್ಷಣ ಸಂಸ್ಥೆಗಳು, ವಿದ್ಯಾರ್ಥಿಗಳ ಶ್ರೇಯೋಭಿವೃದ್ದಿಗಾಗಿ ಸದನದ ಹೊರಗೆ ಹಾಗೂ ಒಳಗೆ ಹೋರಾಟದ ಮೂಲಕ ಶ್ರಮಿಸಿರುವುದಾಗಿ ತಿಳಿಸಿದರು. ದೈಹಿಕ ಶಿಕ್ಷಣವನ್ನು ಪಠ್ಯಕ್ಕೆ ಸೇರಿಸಲು ಆಯೋಗ ರಚನೆ ಮಾಡಿ, ಸೇರ್ಪಡೆ ಮಾಡಲು ಹೋರಾಡಿದ್ದೇನೆ, ಹಾಗಾಗಿಯೇ ಶಿಕ್ಷಕ ಸಮುದಾಯ ತಮ್ಮ ಬೆನ್ನ ಹಿಂದೆ ನಿಂತು ಪ್ರತಿಬಾರಿ ಸೇವೆಗೆ ಅವಕಾಶ ಮಾಡಿಕೊಡುತ್ತಿದೆ, ಕ್ಷೇತ್ರ ವ್ಯಾಪ್ತಿಯ ಎಲ್ಲ ಕಡೆಯಲ್ಲೂ ಈಗಾಗಲೇ ಶಿಕ್ಷಕರನ್ನು ಭೇಟಿ ಮಾಡಿ ಮತ್ತೊಮ್ಮೆ ಬೆಂಬಲಿಸುವoತೆ ಮನವಿ ಮಾಡುತ್ತಿದ್ದೇನೆ, ಎಲ್ಲ ಕಡೆಯೂ ಈ ಹಿಂದೆ ಮಾಡಿರುವ ಸೇವೆಯನ್ನು ಮನವರಿಕೆ ಮಾಡಿಕೊಟ್ಟು ಬೆಂಬಲಿಸುವoತೆ ಮನವಿ ಮಾಡುತ್ತಿದ್ದೇನೆ, ಶಿಕ್ಷಕರು ಬೆಂಬಲಿಸುವ ವಿಶ್ವಾಸವಿದೆ ಎಂದರು. ಸಂದರ್ಭದಲ್ಲಿ ಅನುದಾನರಹಿತ ಶಾಲೆಗಳ ಒಕ್ಕೂಟದ ಅಧ್ಯಕ್ಷ ಪಟೇಲ್ ರಾಜು, ದಿವ್ಯಚೇತನ ವಿದ್ಯಾಸಂಸ್ಥೆ ಕಾರ್ಯದರ್ಶಿ ವರದರಾಜು, ಸ್ಪಿçಂಗ್‌ಫೀಲ್ಡ್ ಶಾಲೆ ಸಂಸ್ಥಾಪಕ ಕಿರಣ್, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಸಿ.ರಾಜಶೇಖರ್, ಇಸಿಒ ಗಂಗಾಧರಮೂರ್ತಿ, ಶಿಕ್ಷಕ ರಾಮಣ್ಣ ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss