ಶಿಕ್ಷಣದೊಂದಿಗೆ ವೇದ ಉಪನಿಷತ್ತುಗಳ ಕಲಿಕೆಯೂ ಅಗತ್ಯ: ಅಮಿತ್ ಶಾ

0
211

ಬೆಂಗಳೂರು: ವೇದ ಉಪನಿಷತ್ತು ಮಕ್ಕಳ ಜೀವನಕ್ಕೆ ದಾರಿದೀಪವಾಗಿವೆ. ಶಿಕ್ಷಣದ ಜೊತೆಗೆ ವೇದ ಉಪನಿಷತ್ತುಗಳ ಕಲಿಕೆಯೂ ಅಗತ್ಯ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದರು.

ಇಂದು ಅರಮನೆ ಮೈದಾನದಲ್ಲಿ ವೇದಾಂತ ಭಾರತಿ ವತಿಯಿಂದ ವಿವೇಕದೀಪಿನಿ ಮಹಾಸಮರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕೇಂದ್ರ ಗೃಹ ಸಚಿವ ಅಮಿತ್ ಶಾ ವೇದಿಕೆ ಮೇಲೆ ಬಂದ ಕೂಡಲೇ ಸಾವಿರಾರು ವಿದ್ಯಾರ್ಥಿಗಳು ಸಾಮೂಹಿಕವಾಗಿ ವಿವೇಕದೀಪಿನಿ ಶ್ಲೋಕ ಪಠಣ ಮಾಡಿದರು. ಶ್ಲೋಕದ ಮೂಲಕವೇ ಅಮಿತ್ ಶಾ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಒಂದೇ ಸ್ಥಳದಲ್ಲಿ ಒಂದೇ ಸ್ವರದಲ್ಲಿ ಸಾವಿರಾರು ಮಕ್ಕಳು ಶ್ಲೋಕ ಪಠಣ ಮಾಡುವುದನ್ನು ಕೇಳಿದರೆ ಮನಸ್ಸು ತುಂಬಿ ಬರುತ್ತದೆ. ಹೃದಯದಲ್ಲಿ ವಿಶೇಷವಾದ ಆನಂದ ಉಂಟಾಗುತ್ತದೆ. ಮಕ್ಕಳ ಶ್ಲೋಕ ಉಚ್ಛಾರಣೆಯಿಂದಾಗಿ ಈ ಸ್ಥಳದಲ್ಲಿ ಪವಿತ್ರ ವಾತಾವರಣ ನಿರ್ಮಾಣವಾಗಿದೆ ಎಂದರು.

ವೇದಾಂತ ಭಾರತಿ ಜೊತೆ ನಾವಿದ್ದೇವೆ: ನವ ಭಾರತ ನಿರ್ಮಾಣದಲ್ಲಿ ವೇದಾಂತ ಭಾರತಿ ಶ್ರಮಿಸುತ್ತಿದೆ. ರತ್ನಮಾಲಿಕೆ ಚಿಣ್ಣರಿಗೆ ಪ್ರೇರಣೆಯಾಗಿದೆ. ಜೀವನದಲ್ಲಿ ಉತ್ತಮ ಮಾರ್ಗ ತೋರುತ್ತದೆ. ವೇದಾಂತ ಭಾರತಿ ಬಗ್ಗೆ ಪ್ರಧಾನಿ ಮೋದಿ ಅವರಿಗೆ ವಿಶ್ವಾಸವಿದೆ. ವೇದಾಂತ ಭಾರತಿ ಜೊತೆ ನಾವಿದ್ದೇವೆ ಎಂದು ತಿಳಿಸಿದರು.

ರತ್ನ ಮಾಲೀಕಾ ಅಭ್ಯಾಸದಿಂದ ಜೀವನ ಕ್ರಮ ಬದಲಾವಣೆ: ಶ್ರೀ ಶಂಕರಾಚಾರ್ಯರ ಪ್ರಶ್ನೋತ್ತರ ರತ್ನ ಮಾಲೀಕಾ ಅಭ್ಯಾಸ ಮಾಡುವುದರಿಂದ ನಮ್ಮ ಜೀವನ ಕ್ರಮ ಬದಲಾಗುತ್ತದೆ. ಈ ಶ್ಲೋಕಗಳ ಒಳಾರ್ಥ ತಿಳಿಯಬೇಕು. ಜೀವನದ ಉದ್ದೇಶ ಸಾರ್ಥಕವಾಗಲಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿಯವರು ಇದನ್ನು 23 ಭಾಷೆಗಳಿಗೆ ಭಾಷಾಂತರ ಮಾಡಿಸಿದ್ದಾರೆ. ನಾನು ಸಹ ಗುಜರಾತಿ ಅನುವಾದನ್ನು ಓದುತ್ತಿದ್ದೇನೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here