Thursday, July 7, 2022

Latest Posts

ಶಿಕ್ಷಣ ಸಂಸ್ಥೆ ಸೇರಿದಂತೆ ಹಲವು ಅಂಗಡಿಗಳ ಬೀಗ ಮುರಿದು ಕೈ ಚಳಕ ತೋರಿದ ಕಳ್ಳರು!

ಹೊಸ ದಿಗಂತ ವರದಿ, ಮಳವಳ್ಳಿ:

ತಡರಾತ್ರಿ ಪಟ್ಟಣದ ಶಾಂತಿ ಶಿಕ್ಷಣ ಸಂಸ್ಥೆ ಸೇರಿದಂತೆ ಹಲವು ಅಂಗಡಿಗಳ ಬೀಗ ಮೀಟಿದ ಚೋರರು ನಗದು ಕದ್ದೊಯ್ದಿರುವ ಘಟನೆ ಗ್ರಾಮಾಂತರ ಮತ್ತು ಪಟ್ಟಣದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಗ್ರಾಮಾಂತರ ಠಾಣಾ ವ್ಯಾಪ್ತಿಯ ಶಾಂತಿ ಕಾಲೇಜಿನ ಬೀಗ ಮುರಿದು ಒಳನುಗ್ಗಿದ ಕಳ್ಳರು ಕಚೇರಿಯಲ್ಲಿದ್ದ 25 ಸಾವಿರ ನಗದು, ಚೆಕ್ ಬುಕ್ ಹಾಗೂ ಕೆಲ ದಾಖಲಾತಿಗಳನ್ನು ಕಳ್ಳತನ ಮಾಡಿ, ನಂತರ ಪಕ್ಕದಲ್ಲಿಯೇ ಇದ್ದ ಶಾಂತಿ ಸಮುದಾಯದ ಕಚೇರಿಯಲ್ಲೂ 20 ಸಾವಿರ ನಗದು ದೋಚಿ, ಬೀರುನಲ್ಲಿದ್ದ ದಾಖಲಾತಿಯನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ ಎನ್ನಲಾಗಿದೆ.
ಪಟ್ಟಣದ ಪೊಲೀಸ್ ಠಾಣಾ ವ್ಯಾಪ್ತಿಯ ಮೈಸೂರು ರಸ್ತೆಯ ಸುಜುಕಿ ಬೈಕ್ ಶೋ ರೋಮ್ ನ ಕಿಟಕಿಯ ಸರಳನ್ನು ಬ್ಲೇಡ್ ನಿಂದ ಕತ್ತರಿಸಿ ಒಳಗೆ ನುಗ್ಗಿ 8 ಸಾವಿರ ರೂ.ನಗದು ಕಳುವು ಮಾಡಿದ್ದು, ಕಿಟಕಿಯ ಒಳ ನುಗ್ಗುವ ದೃಶ್ಯ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದ್ದು, ಆರೋಪಿಗಳ ಕಣ್ಣು ಮಾತ್ರ ಕಾಣುತ್ತಿದೆ. ಸುಲ್ತಾನ್ ರಸ್ತೆಯ ಸ್ವರಾಜ್ ಟ್ರ್ಯಾಕ್ಟರ್ ಶೋ ರೋಮ್ ನಲ್ಲೂ ಕಳ್ಳತನ ಮಾಡಿದ್ದಾರೆ.
ಘಟನಾ ಸ್ಥಳಕ್ಕೆ ಡಿವೈಎಸ್‍ಪಿ ಎಂ.ಜೆ.ಪೃಥ್ವಿ, ಪಿಎಸ್‍ಐ ಡಿ.ರವಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಎರಡು ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss