ಶಿಯೋಮಿ ಕಂಪನಿಯಿಂದ ಬರುತ್ತಿದೆ ಮಾತು ಕೇಳುವ ಸ್ಮಾರ್ಟ್ ಮೌಸ್..

0
146

ವಿವಿಧ ಎಲೆಕ್ಟ್ರಾನಿಕ್‌ ಗ್ಯಾಜೆಟ್‌ಗಳನ್ನು ಪರಿಚಯಿಸುತ್ತಿರುವ ಶಿಯೋಮಿ ಈಗ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಆಧರಿಸಿ ಕಾರ್ಯನಿರ್ವಹಿಸುವ ಸ್ಮಾರ್ಟ್‌ ಮೌಸ್‌ ಅನ್ನು ಅಭಿವೃದ್ಧಿಪಡಿಸಿದೆ. ಶಿಯೋ ಎಐಮೌಸ್‌ ಎಂದು ಕರೆದಿರುವ ಈ ಮೌಸ್‌ ವಾಯ್ಸ್‌ ಅಸಿಸ್ಟಂಟ್‌ ಆಗಿ ಸ್ಪಂದಿಸುತ್ತದೆ. ನೀವು ದನಿಯ ಮೂಲಕ ನೀಡಿದ ಆದೇಶವನ್ನು ಕಾರ್ಯರೂಪಕ್ಕೆ ತರುತ್ತದೆ.
ಮೌಸ್‌ ಮೇಲೆ, ಮಧ್ಯ ಭಾಗದಲ್ಲಿ ಕೆಂಪು ಬಣ್ಣದ ಬಟನ್‌ ಇದ್ದು, ಇದನ್ನು ದೀರ್ಘವಾಗಿ ಒತ್ತಿದರೆ ವಾಯ್ಸ್‌ ಅಸಿಸ್ಟಂಟ್‌ ಸಕ್ರಿಯವಾಗುತ್ತದೆ. ನೀವು ‘ಓಪನ್‌ ವರ್ಡ್‌’ ಎಂದು ಹೇಳಿದರೆ ಅದು, ವರ್ಡ್‌ ಡಾಕ್ಯುಮೆಂಟನ್ನು ಓಪನ್‌ ಮಾಡುತ್ತದೆ. ಹಾಗೆಯೇ ಕಂಪ್ಯೂಟರ್‌ ಶಟ್‌ಡೌನ್‌ ಮಾಡು ಎಂದೂ ಆದೇಶಿಸಬಹುದು.
ಅಷ್ಟೇ ಅಲ್ಲ, ಚೈನೀಸ್‌ ನಿಂದ ಇಂಗ್ಲಿಷ್‌ಗೆ, ಜಾಪನೀಸ್‌ಗೆ ಮತ್ತು ಕೊರಿಯನ್‌ ಭಾಷೆಗೆ ಅನುವಾದ ಮಾಡಿಕೊಡಬಲ್ಲದು ಕೂಡ. 750 ಎಂಎಎಚ್‌ ಬ್ಯಾಟರಿ ಇರುವ ಈ ಮೌಸ್‌ ಒಮ್ಮೆ ಚಾರ್ಜ್‌ ಮಾಡಿದರೆ 30 ದಿನಗಳ ಕಾಲ ಸತತವಾಗಿ ಕೆಲಸ ಮಾಡಬಲ್ಲದು. ಇದರಲ್ಲಿ 4000 ಡಿಪಿಐ ಹೈ ಪ್ರಿಸಿಷನ್‌ ಸೆನ್ಸಾರ್‌ ಇರುವುದರಿಂದ ಇದನ್ನು, ಪಾರದರ್ಶಕದ ಮೇಲ್ಮೈಗಳ ಮೇಲೆ, ಅಂದರೆ ಗಾಜಿನ ಮೇಲಿಟ್ಟೂ ಬಳಸಬಹುದು.

LEAVE A REPLY

Please enter your comment!
Please enter your name here