Monday, August 15, 2022

Latest Posts

ಶಿರಸಿಯಲ್ಲಿ ತಾಂತ್ರಿಕ ದೋಷದಿಂದ ನೇವಿಗೆ ಸೇರಿದ ಹೆಲಿಕಾಪ್ಟರ್ ಲ್ಯಾಂಡ್: ಸೆಲ್ಫಿಗಾಗಿ ಮುಗಿಬಿದ್ದ ಜನತೆ

ಹೊಸ ದಿಗಂತ ವರದಿ, ಶಿರಸಿ:

ಭಾರತ ಸರ್ಕಾರದ ನೇವಿಗೆ ಸೇರಿದ ಹೆಲಿಕಾಪ್ಟರ್ ಒಂದು ತಾಂತ್ರಿಕ ದೋಷದಿಂದ ಶಿರಸಿ ತಾಲೂಕಿನ ದಾಸನಕೊಪ್ಪ ಬಳಿಯಲ್ಲಿ ಲ್ಯಾಂಡ್ ಆಗಿದ್ದು, ಹೆಲಿಕಾಪ್ಟರ್ ನೋಡಲು, ಸೆಲ್ಫಿ ತೆಗೆಯಲು ಸ್ಥಳೀಯ ಜನರು ಮುಗಿ ಬಿದ್ದರು.
8 ಜನರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಲ್ಯಾಂಡ್ ಆಗಿದ್ದು, ಎಲ್ಲರೂ ಸೇಫ್ ಆಗಿದ್ದಾರೆ. ದಾಸನಕೊಪ್ಪದ ಎಪಿಎಮ್ಸಿ ಗ್ರೌಂಡ್ ನಲ್ಲಿ ತುರ್ತಾಗಿ ಲ್ಯಾಂಡ್ ಮಾಡಲಾಗಿದೆ. ಬೆಂಗಳೂರಿನಿಂದ ಗೋವಾಕ್ಕೆ ತೆರಳುತ್ತಿದ್ದ ಹೆಲಿಕಾಪ್ಟರ್ ಇದು ಎನ್ನಲಾಗಿದ್ದು, ತಾಂತ್ರಿಕ ದೋಷ ಸರಿಪಡಿಸಲು ಗೋವಾದಿಂದ ತಜ್ಞರ ತಂಡವೊಂದು ಶಿರಸಿಗೆ ಆಗಮಿಸುತ್ತಿದೆ ಎನ್ನಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss