Monday, August 8, 2022

Latest Posts

ಶಿರಾಳಕೊಪ್ಪ| ಎತ್ತಿನಗಾಡಿ ಸಮೇತ ಎತ್ತುಗಳು ಮುುಳುಗಿ ಜೀವಂತ ಸಮಾಧಿ

ಶಿರಾಳಕೊಪ್ಪ: ಎತ್ತಿನಗಾಡಿ ಸಮೇತ ಎತ್ತುಗಳು ಮುುಳುಗಿ ಜೀವಂತ ಸಮಾಧಿಯಾಗಿರುವ ಘಟನೆ ಸಮೀಪದ ಹಿರೇಜಂಬೂರು ಗ್ರಾಮದಲ್ಲಿ ನಡೆದಿದೆ. ಭಾನುವಾರ ಬೆಳಗ್ಗೆ ಮಾಲತೇಶಪ್ಪ ಬಿನ್ ಮಡಿವಾಳಪ್ಪ ಎಂಬುವವರು ಊರಿನ ಸಮೀಪದ ದೊಡ್ಡಕೆರೆಯಲ್ಲಿ ಎತ್ತುಗಳಿಗೆ ನೀರು ಕುಡಿಸಲು ಹೋದಾಗ ಆಕಸ್ಮಿಕವಾಗಿ ಬೆದರಿದ ಎತ್ತುಗಳು ನೀರಿನಲ್ಲಿ ಗಾಡಿ ಸಮೇತ ಮುಳುಗಿ ಈಜಿ ಹೊರಬರಲಾಗದೇ ಜೀವಂತ ಸಮಾಧಿಯಾಗಿರುವ ದಾರುಣ ಘಟನೆ ನಡೆದಿದೆ.
ಸ್ಥಳಕ್ಕೆ ಸರ್ಕಾರಿ ಪಶು ವೈದ್ಯಾಧಿಕಾರಿಗಳಾದ ಡಾ. ಜಯಪ್ಪ ಡಾ. ರಾಜು ಗ್ರಾಮ ಲೆಕ್ಕಾಧಿಕಾರಿ ಅವಿನಾಶ್ ಭೇಟಿ ನೀಡಿ ಪರಿಶೀಲಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss