Sunday, August 14, 2022

Latest Posts

ಶಿರಾ-ಆರ್ ಆರ್ ನಗರದಲ್ಲಿ ಫಲಿಸಲಿಲ್ಲ ಕಾಂಗ್ರೆಸ್- ಜೆಡಿಎಸ್ ಲೆಕ್ಕಾಚಾರ: ಗೆದ್ದು ಬೀಗಿತು ಬಿಜೆಪಿ!

ಹೊಸ ದಿಗಂತ ಆನ್ ಲೈನ್ ಡೆಸ್ಕ್ :

ತುಮಕೂರಿನ ಶಿರಾ ಹಾಗೂ ರಾಜ್ಯ ರಾಜಧಾನಿ ಬೆಂಗಳೂರಿನ ರಾಜರಾಜೇಶ್ವರಿನಗರ ಉಪ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಬಿಗ್ ಫೈಟ್ ಹಣಾಹಣಿಯಳ್ಳಿ ಕೊನೆಗೂ ಗೆಲುವಿನ ಹಾರ ಬಿಜೆಪಿ ಪಾಲಿಗೆ ಒದಗಿ ಬಂದಿದೆ.
ಶಿರಾದಲ್ಲಿ ರಾಜೇಶ್ ಗೌಡ ಗೆಲುವನ್ನು ಸಾಧಿಸುವ ಮೂಲಕ, ಮೊಟ್ಟ ಮೊದಲ ಬಾರಿಗೆ ಶಿರಾದಲ್ಲಿ ಕಮಲವನ್ನು ಅರಳಿಸಿದ್ದಾರೆ. ಇತ್ತ ಆರ್ ಆರ್ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಹ್ಯಾಟ್ರಿಕ್ ಗೆಲುವನ್ನು ಸಾಧಿಸಿದ್ದಾರೆ. ಈ ಮೂಲಕ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಧೂಳಿಪಟವಾಗಿ, ಬಿಜೆಪಿ ಭರ್ಜರಿ ಗೆಲುವನ್ನು ಸಾಧಿಸಿದೆ.
ಇತ್ತ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಸೋಲನ್ನು ಕಾಣುವಂತಾಗಿದೆ. ಬಿಜೆಪಿಯ ವಿಜಯೇಂದ್ರ ಮಾಸ್ಟರ್ ಪ್ಲಾನ್ ಗೆ ಬಿಜೆಪಿ ಎರಡು ಕ್ಷೇತ್ರಗಳಲ್ಲಿ ಗೆಲುವಿನ ನಗೆಯನ್ನು ಬೀರುವಂತಾಗಿದೆ.
ಆರ್ ಆರ್ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನಗೆ ಹ್ಯಾಟ್ರಿಕ್ ಗೆಲುವು
ಮುನಿರತ್ನ 2013ರ ಚುನಾವಣೆಯಲ್ಲಿ 71,064 ಮತಗಳನ್ನು ಗಳಿಸಿದ್ದ ಅವರು, 18,813 ಮತಗಳ ಅಂತರದಿಂದ ಗೆದ್ದಿದ್ದರು. 2018ರ ಚುನಾವಣೆಯಲ್ಲಿ ಮುನಿರತ್ನ 1,08,064 ಮತಗಳನ್ನು ಗಳಿಸಿ, 25,492 ಮತಗಳ ಅಂತರದಿಂದ ಗೆದ್ದಿದ್ದರು. ಇದೀಗ 2020ರ ಉಪ ಚುನಾವಣೆಯಲ್ಲಿ 1,25,734 ಮತಗಳನ್ನು ಗಳಿಸಿದ್ದಾರೆ. ಕಾಂಗ್ರೆಸ್  67,798, ಜೆಡಿಎಸ್ 10,251 ಮತಗಳನ್ನು ಪಡೆದುಕೊಂಡಿದ್ದಾರೆ.
ಶಿರಾದಲ್ಲಿ ಮೊದಲ ಬಾರಿಗೆ ಗೆಲುವಿನ ನಗೆಬೀರಿದ ಬಿಜೆಪಿ
ಇತ್ತ ಶಿರಾ ಉಪ ಚುನಾವಣೆಯಲ್ಲಿ ಬಿಜೆಪಿಯ ರಾಜೇಶ್ ಗೌಡ ಹಾಗೂ ಕಾಂಗ್ರೆಸ್ ನ ಟಿಬಿ ಜಯಚಂದ್ರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಕೊನೆಯ ಹಂತದಲ್ಲಿ ಬಿಜೆಪಿ ಗೆಲುವಿನ ದಡ ತಲುಪಿದೆ .ಬಿಜೆಪಿಯ ಅಭ್ಯರ್ಥಿ ರಾಜೇಶ್ ಗೌಡ 74422 ಮತಗಳನ್ನು ಗಳಿಸಿದ್ದರೇ, ಕಾಂಗ್ರೆಸ್ ಅಭ್ಯರ್ಥಿ ಟಿಬಿ ಜಯಚಂದ್ರ 61543 ಮತಗಳನ್ನು ಪಡೆದುಕೊಂಡಿದ್ದಾರೆ. ಜೆಡಿಎಸ್ ನ ಅಮ್ಮಾಜಮ್ಮ 35982 ಮತಗಳನ್ನು ಪಡೆದುಕೊಂಡಿದ್ದಾರೆ. ಈ ಮೂಲಕ ಬಿಜೆಪಿಯ ಅಭ್ಯರ್ಥಿ ರಾಜೇಶ್ ಗೌಡ ಮುನ್ನಡೆ ಸಾಧಿಸುವ ಮೂಲಕ, ಶಿರಾ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss