ಬೆಂಗಳೂರು: ಶಿರಾ ಹಾಗೂ ಆರ್ ಆರ್ ನಗರ ಉಪಚುನಾವಣೆ ಅಭ್ಯರ್ಥಿ ಆಯ್ಕೆಗೆ ಇಂದು ಬಿಜೆಪಿ ಸಭೆ ನಡೆಸಲಿದೆ. ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ಎರಡೂ ಕ್ಷೇತ್ರಗಳಲ್ಲೂ ಸದೃಢ ಅಭ್ಯರ್ಥಿಯನ್ನು ಆಯ್ಕೆ ಮಾಡುವ ರಾಜಕೀಯ ಕಾರ್ಯಕ್ಕೆ ಬಿಜೆಪಿ ಬಿರುಸಿನ ಕಾರ್ಯ ಕೈಗೊಂಡಿದೆ.
ಈ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸಭೆನಡೆಯಲಿದೆ. ಸಭೆಯ ಬಳಿಕ ಆಯ್ಕೆಯಾದ ಪಟ್ಟಿಯನ್ನು ಹೈಕಮ್ಯಾಂಡ್ ಒಪ್ಪಿಗೆ ಪಡೆಯಲಿದೆ.
ಆರ್ ಆರ್ ನಗರ ಚುನಾವಣೆಗೆ ಟಿಕೆಟ್ ಪಡೆಯುವ ನಿರೀಕ್ಷೆಯಲ್ಲಿ ಮಾಜಿ ಶಾಸಕ ಮುನಿರತ್ನ ಹಾಗೂ ತುಳಸಿ ಮುನಿರಾಜು ಗೌಡ ಇದ್ದಾರೆ.
ಮತ್ತೆಲ್ಲರ ಹೆಸರನ್ನು ಕಮಲ ಹಾಗೂ ಕೈ ಪಡೆಗಳು ಅಧಿಕೃತ ಘೋಷಣೆ ಮಾಡಬೇಕಿದೆ.