ಹೊಸ ದಿಗಂತ ವರದಿ ತುಮಕೂರು:
ಶಿರಾ ಉಪಚುನಾವಣೆಯಲ್ಲಿ ಆರಂಭದಿಂದಲೂ ಬಿಜೆಪಿ ಅಭ್ಯರ್ಥಿಯಾದ ರಾಜೇಶ್ ಗೌಡ ಲೀಡ್ ಕಾಯ್ದು ಕೊಂಡು ಬರುತ್ತಿದ್ದಾರೆ. 12ನೇ ಸುತ್ತಿನ ಮತಎಣಿಕೆ ಮುಕ್ತಾಯವಾದಾಗ ಬಿಜೆಪಿ ಅಭ್ಯರ್ಥಿ 37808ಮತಗಳನ್ನು ಪಡೆದು ಕಾಂಗ್ರೆಸ್ ಅಭ್ಯರ್ಥಿಗಿಂತ 7870ಮತಗಳ ಮುನ್ನಡೆ ಸಾದಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ29938 ಮತಗಳನ್ನೂ ಜೆಡಿಎಸ್ ಅಭ್ಯರ್ಥಿಗಳ 19522 ಮತಗಳನ್ನು ಪಡೆದುಕೊಂಡಿದ್ದಾರೆ. 13ನೇ ಸುತ್ತಿನ ಮತಎಣಿಕೆ ಮುಕ್ತಾಯವಾದಾಗ ಬಿಜೆಪಿ ಅಭ್ಯರ್ಥಿ 41642 ಮತಗಳನ್ನು ಪಡೆದು ಕಾಂಗ್ರೆಸ್ ಅಭ್ಯರ್ಥಿಗಿಂತ 8471ಮತಗಳ ಮುನ್ನಡೆ ಸಾದಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ33171ಮತಗಳನ್ನೂ ಜೆಡಿಎಸ್ ಅಭ್ಯರ್ಥಿಗಳ20356 ಮತಗಳನ್ನು ಪಡೆದುಕೊಂಡಿದ್ದಾರೆ.