ಹೊಸ ದಿಗಂತ ವರದಿ ತುಮಕೂರು:
ಶಿರಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕಾಂಗ್ರೆಸ್ ಅಭ್ಯರ್ಥಿಯ ವಿರುದ್ಧ ಅಂತರ ಕಾಯ್ದುಕೊಂಡು
ಬರುತ್ತಿದ್ದಾರೆ ಆದರೂ 14ನೇ ಸುತ್ತಿನ ಎಣಿಕೆ ಫಲಿತಾಂಶ ಬಂದಾಗ ಈ ಅಂತರ ಒಮ್ಮೆಲೇ 5329ರಷ್ಟು ಕಡಿಮೆ ಆಯಿತು.
13 ನೇ ಸುತ್ತಿನಲ್ಲಿ ಇದ್ದ 8421 ರ ಅಂತರ ಒಮ್ಮೆಗೇ 3142 ಕ್ಕೆ ಬಂತು. 14ನೇ ಸುತ್ತಿನಲ್ಲಿ ಈ ಅಂತರ 765ಕ್ಕೆ ಇಳಿಯಿತು. 15 ನೇ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ 43684 ಮತಗಳನ್ನುಪಡೆದರೆ ಕಾಂಗ್ರೆಸ್ ಅಭ್ಯರ್ಥಿಗಳ 1919ರಂ ಮತಗಳನ್ನು ಪಡೆದರು. ಜೆಡಿಎಸ್ ಅಭ್ಯರ್ಥಿಗಳ3051 ಮತಗಳನ್ನು ಪಡೆದರು. 14 ನೇ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ಕೇವಲ 205ಮತಗಳನ್ನು ಪಡೆದುಕೊಂಡಿದ್ದಾರೆ. 15ನೇ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ಪಡೆದ ಮತಗಳು ಕೇವಲ 1837. 16ನೇ ಸುತ್ತಿನ ಮತಎಣಿಕೆ ಮುಕ್ತಾಯವಾದಾಗ ಬಿಜೆಪಿ ಅಭ್ಯರ್ಥಿ47608ಮತಗಳನ್ನು ಪಡೆದು ಕಾಂಗ್ರೆಸ್ ಅಭ್ಯರ್ಥಿಗಿಂತ 3797ಮತಗಳ ಮುನ್ನಡೆ ಸಾದಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ43811ಮತಗಳನ್ನೂ ಜೆಡಿಎಸ್ ಅಭ್ಯರ್ಥಿಗಳ 23822 ಮತಗಳನ್ನು ಪಡೆದುಕೊಂಡಿದ್ದಾರೆ.