ತುಮಕೂರು: ಶಿರಾ ವಿಧಾನ ಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾದ ಡಾ.ರಾಜೇಶ್ ಗೌಡ ಅವರು 25ಸಾವಿರಕ್ಕೂ ಹೆಚ್ಚಿನ ಮತಪಡೆಯುವ ಮೂಲಕ ಸ್ವಾತಂತ್ರ್ಯಾನಂತರ ಶಿರಾದಲ್ಲಿ ಬಿಜೆಪಿಯ ಕಮಲ ಅರಳಲಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಹೇಳಿದರು.
ಇಂದು ಉಪಚುನಾವಣೆಯಲ್ಲಿ ಮತದಾನ ಮುಗಿದ ನಂತರ ಸಂಜೆ 6.30ರಲ್ಲಿ ಅವರು ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡುತ್ತಿದ್ದರು.
ಈ ವಿಜಯದಶಮಿ ಸಂಪೂರ್ಣ ಯಶಸ್ಸನ್ನು ತಾವು ಕ್ಷೇತ್ರದ ಮತದಾರರಿಗೆ ಅರ್ಪಿಸುವುದಾಗಿ ತಿಳಿಸಿದ ಅವರು ಮತದಾರರ ನಂತರ ತಾಲೂಕಿನ ಬಿಜೆಪಿ ಕಾರ್ಯಕರ್ತರು.ನಾಯಕರು. ಜಿಲ್ಲೆಯ ಪದಾದಿಕಾರಿಗಳು ಮತ್ತು ರಾಜ್ಯ ಮಟ್ಟದ ಎಲ್ಲಾ ನಾಯಕರಿಗೆ ಅರ್ಪಿಸುವುದಾಗಿ ತಿಳಿಸಿದರು.
ಇಂದು ಶೇ 85ರಷ್ಟು ಮತದಾನವಾಗಿದ್ದು.ಮಹಿಳೆಯರು ಮತ್ತು ಯುವಜನತೆ ಬಿಜೆಪಿ ಪರವಾಗಿ ಮತಚಲಾಯಿಸುವ ಮೂಲಕ ಬದಲಾವಣೆಯ ಮೂಲಕ ಶಿರಾ ತಾಲೂಕಿನ ಅಭಿವೃದ್ಧಿ ಬಯಸಿದ್ದು.ಅದಕ್ಕೆ ಬಿಜೆಪಿ ಬದ್ದವಾಗಿದೆ ಎಂದರು.
ಉಪಚುನಾವಣೆ ಘೋಷಣೆಯಾಗದೆ ನಂತರ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಗೆಲುವಿನ ಹುಮ್ಮಸ್ಸಿನಲ್ಲಿದ್ದರು ಆದರೆ ರಾಜೇಶ್ ಗೌಡರನ್ನು ಬಿಜೆಪಿಯ ಅಭ್ಯರ್ಥಿಯಾಗಿ ಮಾಡಿದ ರಾಜ್ಯ ಬಿಜೆಪಿ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಮತ್ತು ಮುಖ್ಯ ಮಂತ್ರಿ ಯಡಿಯೂರಪ್ಪನವರು ಶಿರಾವನ್ನು ಗೆಲ್ಲಲೇಬೇಕು ಎಂದು ಶಪಥ ಮಾಡಿ ತಮಗೆ ಉಸ್ತುವಾರಿ ವಹಿಸಿದ ನಂತರ ರಾಜ್ಯ ಎಲ್ಲಾ ಬಿಜೆಪಿ ಮೋರ್ಚಾಗಳ .ಉಪಮುಖ್ಯಮಂತ್ರಿ ಗಳು. ರಾಜ್ಯ ಬಿಜೆಪಿ ಪದಾಧಿಕಾರಿಗಳು.ಸಚಿವರ ಸಹಕಾರದಿಂದ ಈ ಸವಾಲು ಸ್ವೀಕರಿಸಿದ್ದಾಗಿ ತಿಳಿಸಿದರು.
ಇದುವರೆವಿಗೂ ಶಿರಾದಲ್ಲಿ ಶಾಸಕರು. ಸಚಿವರಾಗಿದ್ದರು ಶ ಶಿರಾದ ಪ್ರಮುಖ ಸಮಸ್ಯೆಯಾದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸದ ಪರಿಣಾಮ ಆ ಸಮಸ್ಯೆಯ ಪರಿಹಾರದ ಹೊಣೆಯೇ ಬಿಜೆಪಿ ಮೇಲೆ ಹೊರಿಸಿದ್ದು.ಆ ಸಮಸ್ಯೆ ಪರಿಹರಿಸಲು ಬಿಜೆಪಿ ಬದ್ದವಾಗಿದೆ. ಅದಷ್ಟೂ ಶೀಘ್ರವಾಗಿ ಮೊದಲೂರು ಕೆರೆಗೆ ಹೇಮಾವತಿ ನೀರು ಹೊರಡಿಸಲು ಕಾರ್ಯಪ್ರವೃತ್ತರಾಗುವುದಾಗಿ ತಿಳಿಸಿದರು.
ಅಕ್ಟೋಬರ್ 30ರಂದು ಮೊದಲೂರು ಮತ್ತು ಶಿರಾದಲ್ಲಿ ನಡೆದ ಮುಖ್ಯ ಮಂತ್ರಿಗಳ ಸುನಾಮಿ ರೀತಿಯ ರ್ಯಾಲಿಯಿಂದ ಕಾಲ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ವಿಚಲಿತರಾಗಿದ್ದು ಅವರಿಗೆ ಸೋಲಿನ ವಾಸನೆ ಬಡಿದಿರುವ ಪರಿಣಾಮ ಮಾಜಿ ಸಚಿವ ಜಯಚಂದ್ರ ಅವರು ಚುನಾವಣಾ ಯಂತ್ರದ ದುರ್ಭಳಕೆ ಆರೋಪ ಮಾಡುತ್ತಿದ್ದಾರೆ ಎಂದರು.
ರಾಜ್ಯದಲ್ಲಿನ ಬಿಜೆಪಿ ಅಭ್ಯರ್ಥಿಗಳ ಗೆಲುವು ಕೇವಲ ಒಬ್ಬ ವ್ಯಕ್ತಿಯ ಸಾಧನೆಯಲ್ಲ ಅದು ಪಕ್ಷದ ಎಲ್ಲಾ ಹಂತದ ನಾಯಕರು ಕಾರ್ಯಕರ್ತರ ಸಾಧನೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ತಿನ ಸದಸ್ಯರಾದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್. ಜಿಲ್ಲೆಯ ಬಿಜೆಪಿ ಅಧ್ಯಕ್ಷರಾದ ಸುರೇಶ್ ಗೌಡ. ಶಾಸಕ ಜ್ಯೋತಿ ಗಣೇಶ್. ಮುಖಂಡರಾದ ತಮ್ಮೇಶ್ ಗೌಡ. ಮರಿಸ್ವಾಮಯ್ಯ ಹಾಜರಿದ್ದರು.