ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, May 6, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಶಿರಾ ವಿಧಾನಸಭೆ ಉಪಚುನಾವಣೆ: 17 ನಾಮಪತ್ರ ಕ್ರಮಬದ್ಧ

ತುಮಕೂರು: ಶಿರಾ ವಿಧಾನ ಸಭೆ ಉಪಚುನಾವಣೆ ಇಂದುನಾಮಪತ್ರಗಳ ಪರಿಶೀಲನೆ  ನಡೆಯಿತು. ಕೊನೆಯ ದಿನವಾದ ನಾಮಪತ್ರಗಳ ಪರಿಶೀಲನೆ ನಡೆದು ನಾಮಪತ್ರಗಳನ್ನು ಸಲ್ಲಿಸಿದ್ದ ಹದಿನೇಳು ಮಂದಿಯ ನಾಮಪತ್ರಗಳು ಕ್ರಮಬದ್ದವಾಗಿವೆ ಎಂದು ಚುನಾವಣಾಧಿಕಾರಿ ಡಾ.ನಂದಿನಿದೇವಿ ಅವರು ತಿಳಿಸಿದ್ದಾರೆ.
ಹದಿನೇಳು ಮಂದಿಯಿಂದ 25 ನಾಮಪತ್ರಗಳು ಸಲ್ಲಿಕೆಯಾಗಿದ್ದವು ಕೆಲವರು ಒಂದಕ್ಕಿಂತ ಹೆಚ್ಚು ನಾಮಪತ್ರಗಳನ್ನು ಸಲ್ಲಿಸಿದ್ದರು. ಆ ಪೈಕಿ ಒಬ್ಬರ ಒಂದು ನಾಮ ಪತ್ರ ತಿರಸ್ಕೃತವಾದರೂ, ಅವರ ಮತ್ತೊಂದು ನಾಮಪತ್ರ ಕ್ರಮಬದ್ದವಾಗಿದ್ದ ಪರಿಣಾಮ ಅವರ ಅಭ್ಯರ್ಥಿತನಕ್ಕೆ ತೊಂದರೆ ಆಗಲಿಲ್ಲ ಎಂದರು.
ಟಿ.ಬಿ.ಜಯಚಂದ್ರ  ಕಾಂಗ್ರೆಸ್. ಡಾ.ಸಿ.ಎಂ.ರಾಜೇಶ್ ಗೌಡ ಬಿಜೆಪಿ. ಅಮ್ಮಾಜಮ್ಮ ಜೆಡಿಎಸ್. ಓಬಳೇಶಪ್ಪ.ಬಿ.ಟಿ. ( ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ . ಗಿರೀಶ್ ಭಾರತ ಕಮ್ಯೂನಿಸ್ಟ್ ಪಕ್ಷ. ಪ್ರೇಮಕ್ಕ ರಿಪಬ್ಲಿಕನ್ ಸೇನೆ.ತಿಮ್ಮಕ್ಕ  ರೈತಭಾರತಪಕ್ಷ.
ಪಕ್ಷೇತರರಾಗಿ  ಜಯಣ್ಣ ಉರೂಫ್ ವೈ ಜಯಣ್ಣ. ಎಂ.ಎಲ್. ಎ.ಆರ್. ಕಂಬಣ್ಣ. ಸಾದಿಕ್ ಪಾಶ.ಜಿ.ಎನ್. ನಾಗರಾಜ.ಗುರುಸಿದ್ದಪ್ಪ ಎಂ. . ಎಲ್.ಕೆ.ದೇವರಾಜು.ತಿಮ್ಮರಾಜೇಗೌಡ.ನಿಸಾರ್ ಅಹಮದ್. ಅಂಬ್ರೋಸ್ ಡಿ ಮೆಲ್ಲೋ. ರಂಗಪ್ಪ. ಅವರ ನಾಮಪತ್ರಗಳು ಕ್ರಮಬದ್ದವಾಗಿವೆ ಎಂದರು.
ಅಕ್ಟೋಬರ್ 19 ರಂದು ನಾಮಪತ್ರಗಳನ್ನು ವಾಪಸ್ಸು ಪಡೆಯಲು ಕೊನೆಯ ದಿನವಾಗಿದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss