ತುಮಕೂರು:ಶಿರಾ ವಿಧಾನ ಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ಗೆಲುವು ನಿಶ್ಚಿತ ಎಂದು
ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಸುರೇಶ್ ಗೌಡ ಹೇಳಿದರು.
ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು ಈಗಾಗಲೇ ಶಿರಾ ವಿಧಾನ ಸಭಾ ಕ್ಷೇತ್ರದಲ್ಲಿ ತಾವು ತಾಲೂಕಿನ ಬಿಜೆಪಿ ನಾಯಕರ ಜೊತಯಲ್ಲಿ ಪ್ರವಾಸ ಮಾಡಿದ್ದು ಮತದಾರರ ಒಲವು ಬಿಜೆಪಿಯ ಕಡೆ ಇರುವುದನ್ನು ತಾವು ಗಮನಿಸಿದ್ದೇವೆ ಎಂದರು. ಅಲ್ಲಿ ಅಭ್ಯರ್ಥಿ ಯಾರು ಎಂಬುದು ಮುಖ್ಯವಲ್ಲ ಯಾರೇ ಅಭ್ಯರ್ಥಿಯಾದರೂ ಮತದಾರರು ಅವರನ್ನು ಗೆಲ್ಲಿಸಲಿದ್ದಾರೆ ಎಂದರು.
ಶಿರಾ ಜನತೆಯ ಪ್ರಮುಖ ಬೇಡಿಕೆ ಮೊದಲೂರು ಕೆರೆಗೆ ನೀರು ಮತ್ತು ತಾಲೂಕಿನ 67ಕೆರೆಗಳನ್ನು ತುಂಬಿಸಬೇಕು ಎಂಬುದು.ಈ ಬಗ್ಗೆ ತಾವು ಮತ್ತು ಸ್ಥಳೀಯ ನಾಯಕರಾದ ಬಿ.ಕೆ.ಮಂಜುನಾಥ್ ಮತ್ತು ಎಸ್. ಆರ್ .ಗೌಡರ ಜೊತೆ ಮುಖ್ಯ ಮಂತ್ರಿಗಳಾದ ಯಡಿಯೂರಪ್ಪನವರನ್ನು ಬೇಟಿಯಾಗಿ ಮನವಿಯನ್ನು ಮಾಡಿಕೊಂಡಿದ್ದನು ಕೆಲವೇ ದಿನಗಳಲ್ಲಿ 900ಕೋಟಿ ರೂಗಳ ವೆಚ್ಚದಲ್ಲಿ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಗೆ ಮುಖ್ಯ ಮಂತ್ರಿಗಳು ಭೂಮಿ ಪೂಜೆ ನೆರವೇರಿಸುವರು ಎಂದರು. ಇದಕ್ಕೂ ಮೊದಲು ಮೊದಲೂರು ಕೆರೆಗೆ ಹೇಮಾವತಿ ನೀರು ತುಂಬಿಸಲಾಗುವುದು ಎಂದರು.
ಮುಂದಿನ ಎರಡು ವರ್ಷಗಳಲ್ಲಿ ತಾಲೂಕಿನ ಕೆರೆಗಳಿಗೆ ಭದ್ರಮೇಲ್ದಂಡೆ ನೀರುಹರಿಸಲಾಗುವುದು ಎಂದರು.
ಇದುವರೆಗೆ ತಾಲೂಕಿನಲ್ಲಿ ಆಯ್ಕೆ ಆದವರು ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ ಮಾಡಿ ಹಿಂದುಗಳನ್ನು ನಿರ್ಲಕ್ಷ್ಯಮಾಡಿದ್ದ ಇದರಿಂದ ಅಲ್ಲಿನ ಹಿಂದುಗಳು ಬೇಸರ ಗೊಂಡಿದ್ದಾರೆ ಇದು ಬಿಜೆಪಿ ಗೆಲುವಿಗೆ ಸಹಕಾರಿಯಾಗಿದೆ ಎಂದರು. ಇದುವರೆಗೆ ಅಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ ಎಂದು ಸುರೇಶ್ ಗೌಡ ಆರೋಪಿಸಿದರು. ಯಾದವರು ಮೊದಲಿನಿಂದಲೂ ತಮ್ಮನ್ನು ಎಸ್. ಟಿ. ಸೇರಿಸುವಂತೆ ಮನವಿ ಮಾಡಿಕೊಂಡು ಬಂದಿದ್ದರು.ಆದರೆ ಈ ಬಗ್ಗೆ ಸರ್ಕಾರಗಳು ಗಮನ ಹರಿಸಿರಲಿಲ್ಲ ಆದರೆ ಈ ಬಾರಿ ಮುಖ್ಯ ಮಂತ್ರಿಗಳು ಈಬಗ್ಗೆ ಕೇಂದ್ರ ಸರ್ಕಾರಕ್ಕೆ ಶಿಫಾರಿಸು ಮಾಡುವುದಾಗಿ ತಿಳಿಸಿದ್ದಾರೆ ಎಂದರು.