ತುಮಕೂರು: ಜಿಲ್ಲೆಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಶಿರಾ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಶಾಸಕರು ಆಯ್ಕೆ ಯಾಗಲಿದ್ದಾರೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹೇಳಿದರು.
ತುಮಕೂರಿನಲ್ಲಿ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡುತ್ತಿದ್ದ ಅವರು ತಾವೂ ಸೇರಿದಂತೆ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಸುರೇಶ್ ಗೌಡ ಅವರಾಧಿಯಾಗಿ ರಾಜ್ಯ ಮಟ್ಟದ ನಾಯಕರು ಕ್ಷೇತ್ರದಲ್ಲಿ ಒಂದು ಸುತ್ತು ಪ್ರಚಾರ ಸಭೆಗಳನ್ನು ಮಾಯವಾಗುತ್ತಿದೆ.ಕ್ಷೇತ್ರದ 264ಮತಗಟ್ಟೆಗಳಲ್ಲೂ ಮತದಾರರನ್ನು ಭೇಟಿ ಮಾಡಲಾಗಿದೆ ಎಂದರು. ಈ ಭಾರಿ ಬಿಜೆಪಿ-ಬದಲಾವಣೆಗೆ ಮತ ನೀಡಿ ಎಂಬ ಆಷ್ ಟ್ಯಾಗೋರ್ ಇಟ್ಟುಕೊಂಡು ಕ್ಷೇತ್ರದಲ್ಲಿ ಬಿಜೆಪಿ ಮತಯಾಚನೆ ಮಾಡುತ್ತಿರುವುದಾಗಿ ಅವರು ತಿಳಿಸಿದರು.
ರಾಜ್ಯದ ಚುನಾವಣಾ ಮಂಡಳಿಯು ಬೇವಿನಹಳ್ಳಿ ಮಂಜುನಾಥ್. ಎಸ್. ಆರ್.ಗೌಡ ಮತ್ತು ರಾಜೇಶ್ ಗೌಡ ಅವರುಗಳ ಹೆಸರು ಗಳನ್ನು ಶಿರಾ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿಗಳು ಎಂದ ಬಿಜೆಪಿ ರಾಷ್ಟ್ರೀಯ ಚುನಾವಣ ಮಂಡಳಿಗೆ ಕಳುಹಿಸಿ ಕೊಡಲಾಗಿದೆ ಅಲ್ಲಿ ಅಭ್ಯರ್ಥಿ ಯಾರು ಎಂಬುದನ್ನು ಘೋಷಿಸಲಾಗುತ್ತದೆ ಎಂದರು.
ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಆಗಲಿ ವಿಧಾನ ಸಭೆ ಚುನಾವಣೆಯಲ್ಲಿ ಆಗಲಿ ಪಕ್ಷದಲ್ಲಿ ಯಾರೂ ಸಹ ಬಂಡಾಯಗಾರರು ಇಲ್ಲ ಎಂದರು. ಮುಂದಿನ ದಿನಗಳಲ್ಲಿ ಗ್ರಾಮಪಂಚಾಯಿತಿಯನ್ನು ಹಂತದಲ್ಲಿ ಚುನಾವಣೆಯ ಪ್ರಚಾರ ಸಭೆಗಳನ್ನು ಮಾಡಲಾಗುತ್ತದೆ. ನಮ್ಮ ಕಾರ್ಯಕರ್ತರು ಕ್ಷೇತ್ರದಲ್ಲಿ ಪ್ರತಿಮನೆಗೂ.ಪ್ರತಿ ಮತದಾರರ ಬಳಿಯೂ ಹೋಗಿ ಬಿಜೆಪಿ ಪರಮತಯಾಚನೆ ಮಾಡಲಿದ್ದಾರೆ ಎಂದರು.