Tuesday, August 16, 2022

Latest Posts

ಶಿರಾ ವಿಧಾನ ಸಭೆಯ ಉಪಚುನಾವಣೆ: ಮತಗಟ್ಟೆಗಳತ್ತ ಮುಖವೇ ಮಾಡಿಲ್ಲ 38,076 ಮತದಾರರು!

ತುಮಕೂರು: ನವೆಂಬರ್ 3 ರಂದು ನಡೆದ ಶಿರಾ ವಿಧಾನ ಸಭೆಯ ಉಪಚುನಾವಣೆಯಲ್ಲಿ 38,076ಮತದಾರರು ಮತಚಲಾಯಿಸಲು ಮತಗಟ್ಟೆಗಳತ್ತ ಮುಖವನ್ನೇ ಮಾಡಿಲ್ಲ.
ಶಿರಾ ವಿಧಾನ ಸಭಾ ಕ್ಷೇತ್ರದಲ್ಲಿ 215721 ಮತದಾರರಿದ್ದು ಈ ಪೈಕಿ 177645ಮತದಾರರು ಮಾತ್ರ ತಮ್ಮ ಹಕ್ಕು ಚಲಾಯಿಸಿದ್ದಾರೆ.
110281 ಪುರುಷ ಮತದಾರರ ಪೈಕಿ 92077ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು 18204 ಮತದಾರರು ಮತಗಟ್ಟೆಗಳತ್ತ ಮುಖವನ್ನೇ ಮಾಡಿಲ್ಲ.105434 ಮಹಿಳಾಮತದಾರರ ಪೈಕಿ 85568 ಮತದಾರರು ಮಾತ್ರ ತಮ್ಮ ಹಕ್ಕು ಚಲಾಯಿಸಿದ್ದು 19866ಮಹಿಳೆಯರು ಮತದಾನದಿಂದ ದೂರವೇ ಉಳಿದಿದ್ದಾರೆ.ಕ್ಷೇತ್ರದಲ್ಲಿ 215721 ಮತದಾರರು ಮತಚಲಾಯಿಸುವ ಹಕ್ಕು ಪಡೆದಿದ್ದು ಮತಚಲಾಯಿಸಿದವರು 177645 ಮತದಾರರು ಮಾತ್ರ.
38076ಮತದಾರರು ಏಕೆ ಮತಚಲಾವಣೆ ಮಾಡಲು ಮತಗಟ್ಟೆಗಳಿಗೆ ಬರಲಿಲ್ಲ ಎಂಬ ಬಗ್ಗೆ ಜಿಲ್ಲಾಡಳಿತ ಮುಂದಿನ ದಿನಗಳಲ್ಲಿ ಪರಿಶೀಲನೆ ಮಾಡುವ ಅಗತ್ಯವಿದೆ.ಈ ಮತದಾರರು ಕ್ಷೇತ್ರದಲ್ಲಿ ಇದ್ದಾರೆಯೋ ಇಲ್ಲವೋ ಎಂಬುದನ್ನು ಜಿಲ್ಲಾಡಳಿತ ತಿಳಿದುಕೊಳ್ಳುವುದಕ್ಕೆ ಪ್ರಯತ್ನ ಮಾಡುವುದು ಒಳಿತು. ಒಂದು ವೇಳೆ ಅವರು ಕ್ಷೇತ್ರದಲ್ಲಿ ಇದ್ಧರೂ ಏಕೆ ಮತಚಲಾಯಿಸಲಿಲ್ಲ ಎಂಬುದೂ ಹೊರಬರಬೇಕಿದೇ.ಏಕೆಂದರೆ ಯಾವ ಅಭ್ಯರ್ಥಿಗೂ ಮತಚಲಾವಣೇ ಮಾಡಲು ಇಷ್ಟವಿಲ್ಲದೇ ಇದ್ದರೆ ಅವರಿಗೇ ನೋಟಾ ಸೌಲಭ್ಯ ವಿತ್ತಲ್ಲವೇ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss