Thursday, August 18, 2022

Latest Posts

ಶಿರಾ ಶಾಸಕ, ಮಾಜಿ ಸಚಿವ ಬಿ.ಸತ್ಯನಾರಾಯಣ ವಿಧಿವಶ

ತುಮಕೂರು: ಶಿರಾಶಾಸಕರಾದ ಮಾಜಿ ಸಚಿವ ಬಿ.ಸತ್ಯನಾರಾಯಣ(62) ಅವರು ಮಂಗಳವಾರ ರಾತ್ರಿ 10-45 ಕ್ಕೆ ಇಹಲೋಕ ತ್ಯಜಿಸಿರುವುದಾಗಿ ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ನಾಗರಾಜು ತಿಳಿಸಿದ್ದಾರೆ.

ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಲಿವರ್ ಸಂಬಂಧಪಟ್ಟ ತೊಂದರೆ ಯಿಂದ ಚಿಕಿತ್ಸೆ ಪಡೆಯುತ್ತಿದ್ದರು.
1996 ರಲ್ಲಿ ಮೊದಲ ಬಾರಿ ಶಾಸಕರಾದ ಅವರು ಜೆ.ಹೆಚ್. ಪಟೇಲ್ ಸಚಿವ ಸಂಪುಟದಲ್ಲಿ ಸಚಿವರಾಗಿದ್ದರು. 2004 ಮತ್ತು 2018ರ ವಿಧಾನ ಸಭೆಗೆ ಆಯ್ಕೆ ಯಾಗಿದ್ದರು.

ಅವರು ಪತ್ನಿ ಅಮ್ಮಾಜಮ್ಮ,ನಾಲ್ವರು ಪುತ್ರಿ ಯಾರು ಒಬ್ಬ ಪುತ್ರನನ್ನು ಅಗಲಿದ್ದಾರೆ.ಇಂದು ಬೆಳಗ್ಗೆ ತುಮಕೂರಿನ ಗಾಜಿನ ಮನೆಯಲ್ಲಿ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರೇ ದರ್ಶನಕ್ಕೆ ಬೆಳಗ್ಗೆ 9.30 ರಿಂದ 11 ಗಂಟೆಯವರೆಗೆ ಇಡಲಾಗುವುದು ನಂತರ ಶಿರಾಕ್ಕೆ ತೆಗೆದುಕೊಂಡು ಹೋಗಿ ಅಲ್ಲಿ ಸಾರ್ವಜನಿಕ ದರ್ಶನದ ನಂತರ ಅವರ ಹುಟ್ಟೂರಾದ ಭುವನಹಳ್ಳಿಗೆ ತೆಗೆದುಕೊಂಡು ಹೋಗಿ ಅಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!