Monday, August 15, 2022

Latest Posts

ಶಿರೂರು ಕಳುಹಿತ್ಲು ಕಡಲ ತೀರದಲ್ಲಿ ’ಬಾಯ್’ ಪತ್ತೆ: ಬಂದರಿನ ಮೂಲ ಹುಡುಕಾಟ

ಗಂಗೊಳ್ಳಿ: ಶಿರೂರು ಕಳುಹಿತ್ಲು ಕಡಲ ತೀರದಲ್ಲಿ ಕಂಡು ಬಂದ ಕ್ಷಿಪಣಿಯಾಕಾರದ ವಸ್ತುವನ್ನು ’ಬಾಯ್’ ಎಂದು ಗುರುತಿಸಲಾಗಿದೆ.
ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣಾ ವ್ಯಾಪ್ತಿಯ ಶಿರೂರು ಕಳುಹಿತ್ಲು ಕಡಲ ತೀರದಲ್ಲಿ ಸೋಮವಾರ ರಾತ್ರಿ ಬೃಹತ್ ಗಾತ್ರದ ಕ್ಷಿಪಣಿಯಾಕಾರದ ವಸ್ತು ಕಂಡು ಬಂದಿದ್ದು, ಇದನ್ನು ನೋಡಿದ ಸ್ಥಳೀಯರು ಭೀತಿಗೊಂಡಿದ್ದರು. ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿದ ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ನಂಜಪ್ಪ ಹಾಗೂ ಸಿಬ್ಬಂದಿಗಳು ಕಡಲ ತೀರದಲ್ಲಿ ಪತ್ತೆಯಾದ ವಸ್ತುವನ್ನು ಪರಿಶೀಲಿಸಿದಾಗ ಆ ವಸ್ತು ’ಬಾಯ್’ ಎಂದು ಖಚಿತವಾಗಿದೆ. ಸುಮಾರು ೧೦ ಅಡಿ ಎತ್ತರ ಮತ್ತು ೮ ಟನ್ ತೂಕವಿರುವ ಈ ’ಬಾಯ್’ ಯಾವ ಬಂದರಿನದ್ದು ಎಂಬುದು ಇನ್ನೂ ಖಚಿತವಾಗಿಲ್ಲ. ದೋಣಿ ಮತ್ತು ಬೋಟುಗಳು ಮೀನುಗಾರಿಕಾ ಬಂದರು ಪ್ರವೇಶಿಸುವ ದ್ವಾರದಲ್ಲಿ ಬಂದರು ಪ್ರವೇಶ ದ್ವಾರವನ್ನು ಗುರುತಿಸಲು ಅಳವಡಿಸಲಾಗುತ್ತದೆ ಕರಾವಳಿ ಕಾವಲು ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss