Saturday, June 25, 2022

Latest Posts

ಶಿವಮೊಗ್ಗದಲ್ಲಿ ಎಸ್‍ಎಸ್‍ಎಲ್‍ಸಿ ಮೌಲ್ಯಮಾಪನ ಆರಂಭ

ಶಿವಮೊಗ್ಗ: ನಗರದ ಏಳು ಕೇಂದ್ರಗಳಲ್ಲಿ ಎಸ್‍ಎಸ್‍ಎಲ್‍ಸಿ ಮೌಲ್ಯಮಾಪನ ಆರಂಭವಾಗಿದ್ದು, ಜುಲೈ 23ರವರೆಗೆ ನಡೆಯಲಿದೆ ಎಂದು ಡಿಡಿಪಿಐ ರಮೇಶ್ ತಿಳಿಸಿದ್ದಾರೆ.

ಕಸ್ತೂರಿಬಾ ಬಾಲಿಕಾ ಪ್ರೌಢಶಾಲೆ, ಶಿವಮೊಗ್ಗ, ಕರ್ನಾಟಕ ಪಬ್ಲಿಕ್ ಶಾಲೆ, ಲೋಯೊಲಾ ಪ್ರೌಢಶಾಲೆ, ಸೆಕ್ರೆಡ್‍ಹಾರ್ಟ್ ಪ್ರೌಢಶಾಲೆ, ಡಿ.ವಿ.ಎಸ್.ಸಂಯುಕ್ತ ಪ್ರೌಢಶಾಲೆ, ಮೇರಿ ಇಮ್ಯಾಕ್ಯುಲೇಟ್ ಬಾಲಿಕಾ ಪ್ರೌಢಶಾಲೆ, ರಾಷ್ಟ್ರೀಯ ಬಾಲಕರ ಪ್ರೌಢಶಾಲೆಯಲ್ಲಿ ಮೌಲ್ಯಮಾಪನ ಆರಂಭವಾಗಿದೆ. ಎಲ್ಲಾ ಕೇಂದ್ರಗಳ ಸುತ್ತ ಜಿಲ್ಲಾಧಿಕಾರಿ ಅವರು 144ಸೆಕ್ಷನ್ ಜಾರಿಗೊಳಿಸಿದ್ದಾರೆ.

ಸುಮಾರು 2400 ಶಿಕ್ಷಕರು ಮೌಲ್ಯಮಾಪನ ಕಾರ್ಯದಲ್ಲಿ ತೊಡಗಿದ್ದು, ವಿವಿಧ ತಾಲ್ಲೂಕುಗಳಿಂದ ಬರುವ ಶಿಕ್ಷಕರಿಗೆ ಅವರ ಕೋರಿಕೆ ಮೇರೆಗೆ ಸುಮಾರು 50 ಖಾಸಗಿ ಶಾಲೆಗಳ ಬಸ್‍ಗಳ ವ್ಯವಸ್ಥೆ ಮಾಡಿಕೊಡಲಾಗಿದೆ ಕೇಂದ್ರದಲ್ಲಿ 150 ಶಿಕ್ಷಕರಿಗೆ 01 ಆರೋಗ್ಯ ತಪಾಸಣಾ ಕೌಂಟರ್ ಏರ್ಪಡಿಸಿದ್ದು ಎಲ್ಲಾ ಶಿಕ್ಷಕರೂ ತಪಾಸಣೆಗೆ ಒಳಪಡುವುದು ಕಡ್ಡಾಯವಾಗಿದೆ ಎಂದು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss