ಶಿವಮೊಗ್ಗ: ಜಿಲ್ಲೆಯಲ್ಲಿ ಶನಿವಾರ ಮತ್ತೆ ಆರು ಮಂದಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ. ಇದರಿಂದಾಗಿ ಸೋಂಕಿತರ ಸಂಖ್ಯೆ 41 ಕ್ಕೆ ಏರಿದೆ.ಇದರಲ್ಲಿ ಏಳು ಮಂದಿ ಬಿಡುಗಡೆ ಆಗಿದ್ದು, 34 ಸಕ್ರಿಯ ಪ್ರಕರಣಗಳಿವೆ.
ಈವರೆಗೆ ಮಹಾರಾಷ್ಟ್ರ, ಕೇರಳ, ಆಂದ್ರದಿಂದ ಬಂದವರಲ್ಲಿ ಕೊರೊನಾ ಕಾಣಿಸಿಕೊಂಡಿತ್ತು. ಈಗ ಪಂಜಾಬ್ ನಿಂದ ಆಗಮಿಸಿದ್ದವರಲ್ಲಿ ಪಾಸಿಟಿವ್ ಕಂಡುಬಂದಿದೆ. ಪಂಜಾಬ್ ನಿಂದ ಆಗಮಿಸಿದ್ದ ಮೂವರು ಹಾಗೂ ಬೆಂಗಳೂರಿನಿಂದ ಆಗಮಿಸಿದ್ದ ಮೂವರಲ್ಲಿ ಕೊರೊನಾ ಕಾಣಿಸಿದೆ.
ಕೆಎಸ್ ಆರ್ ಪಿ ಪೋಲೀಸರಿಗೂ ಸೋಂಕು…?
ಬೆಂಗಳೂರಿಗೆ ಕರ್ತವ್ಯದ ಮೇಲೆ ತೆರಳಿದ್ದ ಮೂವರು ಕೆಎಸ್ಆರ್ಪಿ ಪೋಲೀಸರಿಗೂ ಸೋಂಕು ತಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಅವರುಗಳು ವಾಸವಿರುವ ಜಯಂತಿ ಗ್ರಾಮವನ್ನು ಕಂಟೋನ್ಮೆಂಟ್ ಜೋನ್ ಎಂದು ಘೋಷಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.