Wednesday, August 17, 2022

Latest Posts

ಶಿವಮೊಗ್ಗದಲ್ಲಿ ಮತ್ತೆ ಎರಡು ಕಡೆ ಸೀಲ್ ಡೌನ್ !

ಶಿವಮೊಗ್ಗ: ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಜಿಲ್ಲೆಯ ಎರಡು ಕಡೆ ಸೀಲ್ ಡೌನ್ ಮಾಡಲಾಗಿದೆ.
ಶಿವಮೊಗ್ಗ ನಗರದ ಕುಂಬಾರಕೇರಿ ಸೋಂಕಿತನ ಪ್ರಾಥಮಿಕ ಸಂಪರ್ಕಿತರಿಗೆ ಕೊರೋನಾ ಕಾಣಿಸಿದೆ. ಹಾಗಾಗಿ ನಗರದ ತುಮಕೂರು ಶಾಮರಾಯ ರಸ್ತೆಯಲ್ಲಿ ಸೀಲ್ ಡೌನ್ ಮಾಡಲಾಗಿದೆ.
ತೀರ್ಥಹಳ್ಳಿಯಲ್ಲೂ ಸೀಲ್ ಡೌನ್
ತೀರ್ಥಹಳ್ಳಿ ಸಮೀಪದ ಮೇಲಿನ ಕುರುವಳ್ಳಿ ಗ್ರಾಪಂ ವ್ಯಾಪ್ತಿಯ ವಿಠಲ ನಗರದಲ್ಲಿ 5 ವರ್ಷದ ಮಗುವಿಗೆ ಕೊರೋನಾ ಸೋಂಕು ದೃಢಪಟ್ಟಿದೆ.
ಕುರುವಳ್ಳಿ ಪುತ್ತಿಗೆ ಮಠದ ಹಿಂಭಾಗವಿರುವ ವಿಠಲ ನಗರಕ್ಕೆ ಬಾಂಬೆಯಿಂದ ಹಿಂತಿರುಗಿದ್ದ ಮಗುವಿನ ತಂದೆಗೆ ಕೊರೋನಾ ದೃಢಪಟ್ಟಿತ್ತು. ಈಗ ಪತ್ನಿ ಹಾಗೂ ಇಬ್ಬರು ಮಕ್ಕಳಲ್ಲಿ 5 ವರ್ಷದ ಮಗುವಿಗೆ ಕೊರೋನಾ ಸೋಂಕು ದೃಢಪಟ್ಟಿದೆ.
ವಿಠಲನಗರದ ಸೋಂಕು ದೃಢಪಟ್ಟ ಮನೆಯ ಅಕ್ಕಪಕ್ಕದ 5 ಮನೆ ಸೀಲ್‌ಡೌನ್ ಮಾಡಲಾಗಿದೆ. ಇನ್ನುಳಿದ ಇನ್ನೂರು ಮೀಟರ್ ದೂರದವರೆಗಿನ ಮನೆಗಳನ್ನು ಬಫರ್ ಜೋನ್ ಮಾಡಲಾಗಿದ್ದು, ಗ್ರಾಪಂನಿಂದ ಮನೆಗಳ ಸುತ್ತಮುತ್ತ ಔಷಧ ಸಿಂಪಡಣೆ ಮಾಡಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!