ಶಿವಮೊಗ್ಗ: ಕೊರೊನಾ ವೈರಸ್ ವಿಷಯದಲ್ಲಿ ಮೂರನೇ ಲಾಕ್ಡೌನ್ವರೆಗೂ ಹಸಿರು ವಲಯದಲ್ಲಿದ್ದ ಜಿಲ್ಲೆಗೆ ಈಗ ನೆರೆ ರಾಜ್ಯಗಳಿಂದ ಬರುತ್ತಿರುವವರು ಶಾಪವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಶನಿವಾರ ನಾಲ್ಕು ವರ್ಷದ ಹೆಣ್ಣು ಮಗುವಿಗೂ ಕೊರೋನಾ ಬಾಧಿಸಿದೆ.
ಹೊಸನಗರ ತಾಲೂಕಿನ ರಿಪ್ಪನ್ಪೇಟೆ ಸಮೀಪದ ಹಳ್ಳಿಗೆ ಮುಂಬುಯಿಯಿಂದ ಆಗಮಿಸಿದ್ದ ಮೂವರಲ್ಲಿ ಕೊರೊನಾ ಪಾಸಿಟಿವ್ ಇರುವುದು ಶನಿವಾರ ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆಯ 12 ಕ್ಕೆ ಏರಿದಂತಾಗಿದೆ. ಮುಂಬಯಿಯಲ್ಲಿ ನೆಲೆಸಿದ್ದ ಒಂದೇ ಕುಟುಂಬದ ಐವರು ಹಾಗೂ ಇನ್ನೂ ಹತ್ತು ಮಂದಿ ಸೇರಿ ಒಟ್ಟು ಹದಿನೈದು ಮಂದಿ ಮುಂಬಯಿಯಿಂದ ಆಗಮಿಸಿದ್ದರು ಎನ್ನಲಾಗಿದೆ. ಮೂರು ದಿನಗಳ ಹಿಂದೆ ಆಗಮಿಸಿದ್ದ ಇವರನ್ನು ಕ್ವಾರಂಟೈನ್ ಮಾಡಲಾಗಿತ್ತು. ನಂತರ ಮೆಗ್ಗಾನ್ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ಅಲ್ಲಿಂದ ಬಂದಿದ್ದ ಗಂಡ-ಹೆಂಡತಿ ಮತ್ತು ಮಗಳಲ್ಲಿ ಕೊರೋನಾ ಪಾಸಿಟಿವ್ ಕಂಡುಬಂದಿದೆ. ರಿಪ್ಪನ್ಪೇಟೆ ಗ್ರಾಮೀಣ ಪ್ರದೇಶವಾಗಿದ್ದು, ಹಳ್ಳಿಗಳಿಗೆ ಕೊರೋನಾ ಹರಡಲಿದೆಯೇ ಎಂಬ ಆತಂಕ ಜಿಲ್ಲೆಯಲ್ಲಿ ಶುರುವಾಗಿದೆ.