ಶಿವಮೊಗ್ಗದಲ್ಲಿ ಮೂರೇ ದಿನಗಳಲ್ಲಿ ಕೊಲೆ ಪ್ರಕರಣ ಬೇಧಿಸಿದ ಪೋಲಿಸರು

0
441

ಶಿವಮೊಗ್ಗ: ಮೊಬೈಲ್ ವಿಷಯಕ್ಕೆ ಸ್ನೇಹಿತನನ್ನೇ ಹತ್ಯೆ ಮಾಡಿದ್ದ ಘಟನೆಗೆ ಸಂಬಂಧಿಸಿ ಮೂರೇ‌ ದಿನಗಳಲ್ಲಿ ಸಾಗರ ಗ್ರಾಮಾಂತರ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ.
ಸಾಗರ ಸಮೀಪದ ಅರಳಿಕೊಪ್ಪ ಗ್ರಾಮದಲ್ಲಿ ಮೊಬೈಲ್ ಫೋನ್ ವಿಚಾರವಾಗಿ ಸಾಜಿಲ್ ಹುಸೇನ್ ಎಂಬಾತನನ್ನು ಕೊಲೆ ಮಾಡಲಾಗಿತ್ತು.
ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿತರ ಪತ್ತೆ ಬಗ್ಗೆ ಸಾಗರ ಡಿವೈಎಸ್ಪಿ ವಿನಾಯಕ ಶಟಗೇರಿ ಮಾರ್ಗದರ್ಶನದಲ್ಲಿ ಸಾಗರ ಗ್ರಾಮಾಂತರ ಸಿಪಿಐ ಸುನಿಲ್ ಕುಮಾರ್ ನೇತೃತ್ವದ ಸಿಬ್ಬಂದಿಗಳನ್ನೊಳಗೊಂಡ ತಂಡವನ್ನು ರಚಿಸಿ ಕಾರ್ಯಾಚರಣೆಯನ್ನು ನಡೆಸಲಾಗಿತ್ತು.
ಈ ತಂಡ 5 ಜನ ಆರೋಪಿತರುಗಳನ್ನು ದಸ್ತಗಿರಿ ಮಾಡಿದೆ.
ಬಂಧಿತರನ್ನು ಸುಫೇಲ್ @ ಸುಕ್ಕಾ (26)-ಜನ್ನತ್ ನಗರ ಸಾಗರ ಟೌನ್, ಮುಜ್ಜು @ ಮುಜಾಮಿಲ್ ( 25 )- ಹಾನಂಬಿ ನೆಹರುನಗರ ಸಾಗರ ಟೌನ್, ಸುಹೇಬ್ (20 )- ಜನ್ನತ್ ನಗರ ಸಾಗರ ಟೌನ್, ಅಬ್ದುಲ್ ಸಲಾಂ @ ಸಲ್ಲು ( 24)- ಕೆಳದಿ ರಸ್ತೆ ಸಾಗರ ಟೌನ್, ಸಮೀವುಲ್ಲಾ ( 25 )ಜನ್ನತ್ ನಗರ ಸಾಗರ ಟೌನ್ ಎಂದು ಗುರುತಿಸಲಾಗಿದೆ.
ಕೃತ್ಯಕ್ಕೆ ಬಳಸಿದ ಆಯುಧ ಹಾಗೂ 02 ದ್ವಿಚಕ್ರ ವಾಹನಗಳನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ.

LEAVE A REPLY

Please enter your comment!
Please enter your name here