Wednesday, August 10, 2022

Latest Posts

ಶಿವಮೊಗ್ಗ| ಅಕ್ರಮ ಗಾಂಜಾ ಮಾರಾಟಗಾರರ ಜೊತೆ ಪೊಲೀಸ್ ಇಲಾಖೆಗೆ ನೇರ ಸಂಪರ್ಕ: ಸಚಿವ ಕೆ.ಎಸ್.ಈಶ್ವರಪ್ಪ

ಹೊಸದಿಗಂತ ವರದಿ,ಶಿವಮೊಗ್ಗ:

ಅಕ್ರಮ ಗಾಂಜಾ ಮಾರಾಟಗಾರರ ಜೊತೆ ಪೊಲೀಸ್ ಇಲಾಖೆಗೆ ನೇರ ಸಂಪರ್ಕ ಇದೆ. ಪ್ರತಿ ತಿಂಗಳೂ ಮಾಮೂಲಿ ಹೋಗ್ತಾ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಗಂಭೀರ ಆರೋಪ ಮಾಡಿದರು.

ಜಿಲ್ಲಾ ಮಟ್ಟದ ಪ್ರಗತಿಪರಿಶೀಲನ ಸಭೆಯಲ್ಲಿ ಮಾತನಾಡಿ, ಕೆಲ ದಿನಗಳ ಹಿಂದೆ ಸ್ವಲ್ಪ ಬಿಗಿ ಮಾಡಿದ್ರಿ. ಈಗ ಮತ್ತೆ ಯಥಾವತ್ ಅದೇ ಕಥೆ ಆಗಿದೆ. ಅಂಗಡಿಗಳಲ್ಲೇ ಗಾಂಜಾ ಪ್ಯಾಕೇಟ್‌ಗಳು ಸಿಗುತ್ತಿವೆ. ಇದರಲ್ಲಿ ಇಲಾಖೆ ಇನ್ಸ್‌ಪೆಕ್ಟರ್‌ಗಳ ಸಹಿತ ಸಿಬ್ಬಂದಿ ಭಾಗಿಯಾಗಿದ್ದಾರೆ.
ಮಕ್ಕಳು ಗಾಂಜಾ ಖರೀದಿ ಮಾಡಿಕೊಂಡು ಹೋಗೋ ಸ್ಥಿತಿ ಬಂದಿದೆ. ಶಾಲೆಗಳು ಯಾಕೆ ಬೇಕು? ಡಿಪಾರ್ಟ್‌ಮೆಂಟ್ ಇದೆಯೋ, ಇಲ್ವೋ ಗೊತ್ತಾಗ್ತ ಇಲ್ಲ. ಯಾರಾದರೂ ಸಾಯಲಿ, ನಮಗೆ ದುಡ್ಡು ಬಂದ್ರೆ ಆಯ್ತು ಅನ್ನೋ ಮನಸ್ಥಿತಿ ಇದೆ ಎಂದು ಹರಿಹಾಯ್ದರು.

ಭದ್ರಾವತಿ ಶಾಸಕ ಸಂಗಮೇಶ್ವರ್ ಮಧ್ಯೆ ಮಾತನಾಡಿ, ಭದ್ರಾವತಿಯಲ್ಲಿ ಚರ್ಚ್-ದೇವಸ್ಥಾನ-ಶಾಲೆ ಇರುವಲ್ಲಿ ಮದ್ಯದಂಗಡಿ ಆರಂಭಕ್ಕೆ ಅನುಮತಿ ನೀಡಿದ್ದಾರೆ ಎಂದು ತಿಳಿಸಿದರು.

ಇದಕ್ಕೆ ಈಶ್ವರಪ್ಪ ಪ್ರತಿಕ್ರಿಯಿಸಿ, ತಿನ್ನೋದಕ್ಕೂ ಒಂದು ಲಿಮಿಟ್ ಬೇಕು. ಈ ರೀತಿ ದೂರು ಬಂದರೆ ಎಸ್ಪಿ-ಅಬಕಾರಿ ಡಿಸಿ ಮೇಲೆ ನೇರ ಕ್ರಮ ಜರುಗಿಸಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss