ಹೊಸದಿಗಂತ ವರದಿ,ಶಿವಮೊಗ್ಗ:
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಶಿವಮೊಗ್ಗ ಶಾಖೆ ವತಿಯಿಂದ ಸ್ವಾಮಿ ವಿವೇಕಾನಂದರ 158ನೇ ಜನ್ಮ ದಿನವನ್ನು ನಗರದ 8ಕ್ಕೂ ವಿವಿಧ ಕಾಲೇಜುಗಳಲ್ಲಿ ಮತ್ತು ವಿದ್ಯಾರ್ಥಿ ನಿಲಯಗಳಲ್ಲಿ ಆಚರಿಸಲಾಯಿತು. ಶಿವಪ್ಪ ನಾಯಕ ವೃತ್ತದಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ವಿವೇಕಾನಂದರ ಜಯಂತಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ವಿವೇಕಾನಂದರ ಜೀವನ ಸಾಧನೆ , ಅವರು ಯುವಕರಿಗೆ ಆದರ್ಶರಾದ ಬಗೆಗೆ ಮತ್ತು ಅವರ ಆದರ್ಶಗಳನ್ನು ಅಳವಡಿಸಿಕೊಂಡು ಕೆಲಸ ಮಾಡುತ್ತಿರುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ ಕಾರ್ಯದ ಬಗ್ಗೆ ತಿಳಿಸಲಾಯಿತು.
ನಗರ ಕಾರ್ಯದರ್ಶಿ ಧನುಷ್, ಸಹಕಾರ್ಯದರ್ಶಿ ರೇಖೇಶ್ , ವಿದ್ಯಾರ್ಥಿನಿ ಪ್ರಮುಖರಾದ ಸ್ವಾತಿ, ಸುಪ್ರಿಯ, ಅಂಜನ ,ಸಂಧ್ಯಾ, ಅಮೃತ, ನದಿ ,ಲಿಂಗರಾಜ್ ,ಶ್ರೀಪಾದ ,ರಾಜು ,ಚಂದನ್, ಪ್ರಜ್ವಲ್ ಇನ್ನಿತರರು ಉಪಸ್ಥಿತರಿದ್ದರು.