ಶಿವಮೊಗ್ಗ : ಅತ್ಯಾಚಾರಕ್ಕೊಳಗಾಗಿ ಮೆಗ್ಗಾನ್ ಆಸ್ಪತ್ರೆ ಸಖಿವಾರ್ಡ್ ನಲ್ಲಿ ಕೌನ್ಸಿಲಿಂಗ್ ಪಡೆಯುತ್ತಿದ್ದ ಅಪ್ರಾಪ್ತಳಿಗೆ ಚಿಕಿತ್ಸೆ ನೀಡಿದ್ದ ಇಬ್ಬರು ವೈದ್ಯರು ಸ್ವಯಂ ಹೋಂ ಕ್ವಾರಂಟೈನ್ ಗೆ ಒಳಗಾಗಿದ್ದಾರೆ.
ಶಿಕಾರಿಪುರದ ತರಘಟ್ಟ ಬಾಲಕಿಗೆ ವಿವಾಹ ಏರ್ಪಾಟಾಗಿದ್ದ ಸಂದರ್ಭದಲ್ಲಿ ಆಕೆಯನ್ನು ವಶಕ್ಕೆ ಪಡೆದು ಸುರಬಿ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಆಕೆ ಐದು ತಿಂಗಳ ಗರ್ಭಿಣಿ ಎಂದು ಗೊತ್ತಾದ ಬಳಿಕ ಸಖಿ ವಾರ್ಡ್ ನಲ್ಲಿ ಆಪ್ತ ಸಲಹೆಗೆ ಒಳಪಡಿಸಲಾಗಿತ್ತು.
ಈ ಪ್ರಕರಣದಲ್ಲಿ ವಿಚರಣೆ ನಡೆಸಿದ್ದ ಪೊಲೀಸ್ ಅಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಸಿಬ್ಬಂದಿಗಳನ್ನು ಸೋಮವಾರವೇ ಕ್ವಾರಂಟೈನ್ ಮಾಡಲಾಗಿತ್ತು. ಇದೀಗ ಇಬ್ಬರು ವೈದ್ಯರು, ಮೂವರು ಶುಶ್ರೂಷಕರು ಹೋಂ ಕ್ವಾರಂಟೈನ್ ಗೆ ಒಳಗಾಗಿದ್ದಾರೆ.