ಶಿವಮೊಗ್ಗ: ಇದುವರೆಗೆ ಕೋವಿಡ್ 19 ಹಸಿರು ವಲಯದಲ್ಲಿ ಗುರುತಿಸಿಕೊಂಡಿರುವ ಮಲೆನಾಡಿಗೆ ಕೊರೊನಾ ಅಪ್ಪಳಿಸಲಿದೆಯಾ ಎಂಬ ಆತಂಕ ಶುರುವಾಗಿದೆ.
9 ಮಂದಿ ತಬ್ಲಿಘಿ ಜಮಾತ್ ಹೋದವರು ಗುಜರಾತ್ ನಿಂದ ಶನಿವಾರ ನಗರಕ್ಕೆ ಆಗಮಿಸಿದ್ದಾರೆ. ಇದು ಆತಂಕ ಹೆಚ್ಚಲು ಕಾರಣವಾಗಿದೆ.
ಇವರೆಲ್ಲರೂ ಶಿಕಾರಿಪುರ ತಾಲೂಕಿಗೆ ಸೇರಿದವರು ಎನ್ನಲಾಗಿದೆ. ಮಾರ್ಚ್ 5 ರಂದು ದಾವಣಗೆರೆ ಮೂಲಕ ದೆಹಲಿಯಲ್ಲಿ ನಡೆದ ಸಮಾವೇಶದಲ್ಲಿ ಪಾಲ್ಗೊಳ್ಳಲು ತೆರಳಿದ್ದರು. ಬಳಿಕ ವಾಪಸು ಬರುವಾಗ ಅಹಮದಾಬಾದ್ ಮಸೀದಿಯಲ್ಲಿ ತಂಗಿದ್ದರು.
ಅಲ್ಲಿ ಕ್ವಾರಂಟೈನ್ ಮುಗಿಸಿ ಈಗ ಜಿಲ್ಲೆಗೆ ಆಗಮಿಸಿದ್ದಾರೆ. ಇವರನ್ನೆಲ್ಲಾ ನಗರದ ಹೊರ ವಲಯದ ಸಹ್ಯಾದ್ರಿ ಕಾಲೇಜು ಬಳಿ ತಡೆದು, ಅಲ್ಲಿಯೇ ತಪಾಸಣೆಗೆ ಒಳಪಡಿಸಲಾಗಿದೆ. ಚಿತ್ರದುರ್ಗದಲ್ಲಿ ಕ್ವಾರಂಟೈನ್ ಮುಗಿಸಿ ಬಂದವರಲ್ಲೇ ಕೊರೋನಾ ಕಾಣಿಸಿತ್ತು. ಇದೇ ಸಂಗತಿ ಈಗ ಮಲೆನಾಡಿನಲ್ಲಿ ಆತಂಕಕ್ಕೆ ಕಾರಣವಾಗಿದೆ.