ಶಿವಮೊಗ್ಗ : ನಗರದ ಹೊರವಲಯದ ಸೋಗಾನೆಯಲ್ಲಿ ಈಗಾಲೇ ಗುರುತಿಸಲಾಗಿರುವ ಜಾಗದಲ್ಲಿ ಆಯುರ್ವೇದ ವಿಶ್ವವಿದ್ಯಾಲಯ ಸ್ಥಪಾನೆ ಮಾಡಲು ಸರ್ಕಾರ ಕ್ರಮ ಕೈಗೋಳ್ಳುವಂತೆ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ನ ಕಲ್ಲೂರು ಮೇಘರಾಜ್ ಒತ್ತಾಯಿಸಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಯಲ್ಲಿ ಮಾತನಾಡಿದ ಅವರು, ಮನುಷ್ಯರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚು ಮಾಡಲು ಹಾಗೂ ಅನೇಕ ಕಾಯಿಲೆಗಳನ್ನು ಗುಣಪಡಿಸಲು ಆಯುರ್ವೇದ ಔಷಧ ಸಹಕಾರಿ ಎಂಬುದು ಈಗಲೇ ಸಾಬೀತಾಗಿದೆ. ಕೋವಿಡ್ ನಂತಹ ವೈರಸ್ ವಿರುದ್ಧ ಹೋರಾಡಲು ಆಯುರ್ವೇದ ಪ್ರಮುಖ ಅಸ್ತ್ರವಾಗಿದೆ ಎಂಬುದನ್ನು ತಜ್ಞರು ಸಾಬೀತು ಮಾಡಿದ್ದಾರೆ. ಇದರಿಂದಾಗಿ ಇನ್ನಷ್ಟು ಸಂಶೋಧನೆ ಮಾಡಲು ಮತ್ತು ಜನರಿಗೆ ಚಿಕಿತ್ಸೆ ನೀಡಲು ವಿವಿ ಯಿಂದ ಸಾಧ್ಯವಾಗಲಿದೆ ಎಂದು ಹೇಳಿದರು.
ರಾಜ್ಯದಲ್ಲಿರುವ ೭ ಸರ್ಕಾರಿ ಹಾಗು ೭೧ ಖಾಸಗಿ ಆಯುರ್ವೇದ ಕಾಲೇಜುಗಳನ್ನು ವಿವಿ ವ್ಯಾಪ್ತಿಯಲ್ಲಿ ತರಬೇಕು. ವಿವಿಗೆ ಈಗಾಗಲೆ ಅಲ್ಪ ಹಣ ಬಿಡುಗಡೆ ಮಾಡಲಾಗಿದೆ. ಇದರ ಹೊರತಾಗಿ ೧೧೦ ಕೋಟಿ ರೂ. ಬಿಡುಗಡೆ ಮಾಡಿ ವಿವಿ ಕೆಲಸ ಆರಂಭಿಸುವಂತೆ ಒತ್ತಾಯಿಸಿದರು.